ದೆಹಲಿಯಲ್ಲಿ ನಡೆಯುವ ಸ್ವಚ್ಚತಾ ಹೀ ಸೇವಾ-೨೦೨೪ರ ಕಾರ್ಯಕ್ರಮಕ್ಕೆ ಸೂಲೂರು ಗ್ರಾ.ಪಂನ ಸ್ವಚ್ಚತಾವಾಹಿನಿ ಚಾಲಕಿ ಭಾಗ್ಯಮ್ಮ ಆಯ್ಕೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಸ್ವಚ್ಚತಾ ಹೀ ಸೇವಾ-೨೦೨೪ ಪಾಕ್ಷಿಕ ಆಚರಣೆ ಪ್ರಯುಕ್ತ ಅ.೨ರ ಗಾಂಧಿಜಯAತಿಯAದು ದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಿರುವ `ಸ್ವಚ್ಚತಾ ದಿವಸ ಮತ್ತು ಗಾಂಧೀ ಜಯಂತಿ ಕಾರ್ಯಕ್ರಮಕ್ಕೆ ತಾಲ್ಲೂಕಿನ ಸೂಲೂರು ಗ್ರಾಪಂ ಸ್ವಚ್ಚತಾವಾಹಿನಿ ಚಾಲಕರಾದ ಎ.ವೈ.ಭಾಗ್ಯಮ್ಮ ಅವರಿಗೆ ಆಹ್ವಾನ ನೀಡಲಾಗಿದೆ.

ಕೇಂದ್ರ ಕುಡಿಯುವ ನೀರು ಮತ್ತು ನೇರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯದಿAದ ಭಾಗ್ಯಮ್ಮ ಅವರಿಗೆ ಈ ಆಹ್ವಾನ ನೀಡಲಾಗಿದ್ದು, ಕೋಲಾರ ತಾಲ್ಲೂಕಿನ ಸೂಲೂರು ಗ್ರಾಮ ಪಂಚಾಯಿತಿಯ ಸ್ವಚ್ಚತಾ ವಾಹಿನಿಯ ಚಾಲಕರಾಗಿರುವ ಸಫಾಯಿ ಮಿತ್ರ ಆಗಿರುವ ಭಾಗ್ಯಮ್ಮ ಅವರು ಸ್ವಚ್ಚತಾ ಹೀ ಸೇವಾ ಕಾರ್ಯದಲ್ಲಿನ ಬದ್ದತೆ, ಸಾಧನೆ ಗಮನಿಸಿ ಈ ಗೌರವಕ್ಕೆ ಅರ್ಹರಾಗಿದ್ದಾರೆ.

ಭಾಗ್ಯಮ್ಮ ಅವರೊಂದಿಗೆ ಗ್ರಾ.ಪಂನ ಎಲ್ಲಾ ಸದಸ್ಯರು, ಜಲಗಾರರು, ಸಿಬ್ಬಂದಿ ನಿರಂತರ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡು ಸಾಥ್ ನೀಡುತ್ತಿದ್ದು, ಸೂಲೂರು ಗ್ರಾಮ ಪಂಚಾಯಿತಿಯನ್ನು ಜಿಲ್ಲಾ, ರಾಜ್ಯ, ರಾಷ್ಟçಮಟ್ಟದಲ್ಲಿ ಗುರುತಿಸುವಂತೆ ಆಗಿದೆ ಎಂದು ರುವ ಕುರಿತು ಗ್ರಾ.ಪಂ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಹರ್ಷ ವ್ಯಕ್ತಪಡಿಸಿದ್ದಾರೆ.

ಸ್ವಚ್ಚತಾ ಹೀ ಸೇವಾ-೨೦೨೪ರ ಅವಧಿಯಲ್ಲಿ ಹಾಗೂ ಸ್ವಚ್ಚಭಾರತ ಮಿಷನ್ ಗ್ರಾಮೀಣ ಯೋಜನೆಯ ಅನುಷ್ಟಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಉತ್ತಮ ಪ್ರಗತಿ ಸಾಧಿಸಲು ಸಹಕರಿಸಿ ಜಿಲ್ಲೆಯ ಕೆಲವೇ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಸೂಲೂರು ಗ್ರಾ.ಪಂನ ನಾಗಲಾಪುರದವರಾದ ಭಾಗ್ಯಮ್ಮ ಆಯ್ಕೆಯಾಗಿದ್ದು, ದೆಹಲಿಗೆ ವಿಮಾನದಲ್ಲಿ ಹೋಗಿ ಬರುವ ಖರ್ಚನ್ನು ಕೇಂದ್ರ ಕುಡಿಯುವ ನೀರು ಮತ್ತು ನೇರ್ಮಲ್ಯ ಇಲಾಖೆ ಭರಿಸುತ್ತಿದೆ ಎಂದು ಗ್ರಾ.ಪಂ. ಅಧ್ಯಕ್ಷರು ತಿಳಿಸಿದ್ದಾರೆ.

ಕೂಲಿಯಿಂದ ಸ್ವಚ್ಚತಾ ಸೇವೆಗೆ :
ಸೂಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧೩ ಗ್ರಾಮಗಳಲ್ಲಿನ ಘನ, ದ್ರವತ್ಯಾಜ್ಯ ಸಂಗ್ರಹದ ಜವಾಬ್ದಾರಿ ವಹಿಸಿಕೊಂಡಿರುವ ಸೂಲೂರಿನ ಭಾಗ್ಯಮ್ಮ ಬಡತನದ ನಡುವೆ ಕೂಲಿಯಿಂದ ಜೀವನ ಸಾಗಿಸುತ್ತಿದ್ದವರು. ಇದೀಗ ವಾಹನ ಚಾಲನಾ ತರಬೇತಿ ಪಡೆದುಕೊಂಡು ಸೂಲೂರು ಗ್ರಾಮ ಪಂಚಾಯಿತಿಯ ಸ್ವಚ್ಚತಾ ವಾಹಿನಿಯ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನಿತ್ಯ ಕಾಯಕವೆಂಬAತೆ ಸೂಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧೩ ಗ್ರಾಮಗಳಲ್ಲಿ ತನ್ನ ಸಹಾಯಕಿಯಾಗಿರುವ ಶೈಲಜಾ ಅವರೊಂದಿಗೆ ಸಂಚಾರ ಮಾಡುತ್ತಾ ಘನ, ದ್ರವ ತ್ಯಾಜ್ಯ ಸಂಗ್ರಹಿಸಿ ಚೊಕ್ಕಹಳ್ಳಿಯ ಸಮೀಪ ಇರುವ ಜಾಗದಲ್ಲಿ ವಿಲೇವಾರಿ ಮಾಡುತ್ತಾ ಗ್ರಾಮಗಳ ಸ್ವಚ್ಚತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಚಾಲಕ ವೃತ್ತಿಯಲ್ಲಿ ಪಳಗಿದ ದಿಟ್ಟ ಮಹಿಳೆ :
ಭಾಗ್ಯಮ್ಮ ಸ್ವಚ್ಚತಾ ವಾಹನ ಓಡಿಸುವುದರಲ್ಲಿ ಓರ್ವ ಅನುಭವಿ ಚಾಲಕರಂತೆ ಪಳಗಿದ್ದಾರೆ, ವಾಹನವನ್ನು ಲೀಲಾಜಾಲವಾಗಿ ಓಡಿಸುತ್ತಾ ಪ್ರತಿ ಗ್ರಾಮಕ್ಕೂ ಸಮಯಕ್ಕೆ ಸರಿಯಾಗಿ ತಲುಪಿ ಕಸ ಸಂಗ್ರಹಿಸುತ್ತಾ ಜನತೆಯೊಂದಿಗೂ ಉತ್ತಮ ಒಡನಾಟ ಹೊಂದಿದ್ದಾರೆ. ಎಲ್ಲರೊಂದಿಗೂ ಪ್ರೀತಿಯಿಂದ ಮಾತನಾಡುವ ಭಾಗ್ಯಮ್ಮ ಸೂಲೂರು ಗ್ರಾಮ ಪಂಚಾಯಿತಿ ಸ್ವಚ್ಚಗ್ರಾ.ಪಂ ಹೆಗ್ಗಳಿಕೆಗೆ ಪಾತ್ರವಾಗಲು ಸಹಕರಿಸಿದ್ದಾರೆ ಎನ್ನುತ್ತಾರೆ ಗ್ರಾ.ಪಂ ಸಿಬ್ಬಂದಿ.

ಚಿತ್ರ ೦೧ ಕೆ.ಎಲ್.ಆರ್. ೦೬ : ಸ್ವಚ್ಚತಾ ಹೀ ಸೇವಾ-೨೦೨೪ ಪಾಕ್ಷಿಕ ಆಚರಣೆ ಪ್ರಯುಕ್ತ ಅ.೨ರ ಗಾಂಧಿಜಯAತಿಯAದು ದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಿರುವ `ಸ್ವಚ್ಚತಾ ದಿವಸ ಮತ್ತು ಗಾಂಧೀ ಜಯಂತಿ ಕಾರ್ಯಕ್ರಮಕ್ಕೆ ತಾಲ್ಲೂಕಿನ ಸೂಲೂರು ಗ್ರಾಪಂ ಸ್ವಚ್ಚತಾವಾಹಿನಿ ಚಾಲಕರಾದ ಎ.ವೈ.ಭಾಗ್ಯಮ್ಮ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net