ದೂರವಾಣಿ ಸಲಹಾ ಸಮಿತಿಗೆ ನೇಮಕ

CTD MP GOVINDA KARAJOLA----
Published on

ಚಿತ್ರದುರ್ಗ: ಸಂಸದ ಗೋವಿಂದ ಎಂ. ಕಾರಜೋಳ ಅವರ ಶಿಫಾರಸಿನ ಮೇರೆಗೆ ಚಿತ್ರದುರ್ಗ ಹಾಗೂ ದಾವಣಗೆರೆ ಕಂದಾಯ ಜಿಲ್ಲೆಗಳನ್ನು ಒಳಗೊಂಡ ಟೆಲಿಕಾಂ ಜಿಲ್ಲೆಗೆ ಚಿತ್ರದುರ್ಗ ಜಿಲ್ಲೆಯ 8 ಜನರನ್ನು 2 ವರ್ಷಗಳ ಅವಧಿಗೆ ನಾಮ ನಿರ್ದೇಶನ ಮಾಡಿ ಕೇಂದ್ರ ಸಂಪರ್ಕ ಇಲಾಖೆ ಆದೇಶಿಸಿದೆ. ಹೊಳಲ್ಕೆರೆಯ ಸುಜಾತಾ, ಚಿತ್ರದುರ್ಗದ ಬಿ.ಬಿ.ಹಟ್ಟಿ ಬೋರಯ್ಯ, ಎ.ವಿ.ಮಂಜುಳಾ, ಹಿರಿಯೂರಿನ ಕೇಶವಮೂರ್ತಿ, ಹೊಸದುರ್ಗದ ಎನ್.ಆರ್.ಜಗದೀಶ್, ಚಳ್ಳಕೆರೆಯ ಸಿ.ಎ.ಎಸ್.ಪ್ರಸಾದ್, ಮೊಳಕಾಲ್ಮೂರಿನ ಟಿ.ಶಿವದತ್ತ ಹಾಗೂ ಎಚ್.ಮೂರ್ತಿ ಅವರನ್ನು ಸಮಿತಿಗೆ ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net