

ಚೌಳಹಿರಿಯೂರು: ಇಂದು ಸತ್ಯ ಸೋತು ಸುಳ್ಳು ವಿಭೃಂಬಿಸುತ್ತಿದೆ ಎಂದು ಸಾಣೇಹಳ್ಳಿ ಶ್ರೀ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಹೇಳಿದರು.
ಕುರುಬರಹಳ್ಳಿಯಲ್ಲಿ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಮತ್ತು ಹೋಬಳಿ ಘಟಕದ ಶ್ರಾವಣ ಸಂಜೆ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಇಂದು ರಾಜ್ಯದಲ್ಲಿ ಬರಗಾಲ ಎದುರಾಗಿದ್ದರೂ ದುಶ್ಚಟಗಳಿಗೆ ಮಾತ್ರ ಬರಗಾಲವಿಲ್ಲ ಎಂದು ಹೇಳಿದರು.
ಕಡೂರು ಯಳನಾಡು ಮಠದ ಶ್ರೀ ಜ್ಞಾನಪ್ರಭು ಸಿದ್ಧರಾಮದೇಶೀ ಕೇಂದ್ರ ಸ್ವಾಮೀಜಿ ಮಾತನಾಡಿ, 12ನೇ ಶತಮಾನದ ಶರಣರಂತೆ ಗುಡಿ-ಗೋಪುರಗಳ ಕಡೆ ಮುಖ ಮಾಡದೇ ಕಾಯಕ ಪ್ರಜ್ಞೆ ಬಗ್ಗೆ ಅರಿವು ಮೂಡಿಸಿ ಇಷ್ಟಲಿಂಗ ಪೂಜಿಸುವಂತೆ ಸಲಹೆ ನೀಡಿದರು. ಆಗ ಮಾತ್ರ ಇಂತಹ ಕಾರ್ಯಕ್ರಮ ಸಾರ್ಥಕವಾಗುತ್ತದೆ ಎಂದರು.
ಶಾಲಾ ಆವರಣದಲ್ಲಿ ನೂತನವಾಗಿ ನಿರ್ಮಿಸಿದ್ದ ಬಸವೇಶ್ವರ ಬಯಲುರಂಗ ಮಂದಿರವನ್ನು ಶೆಟ್ಟಿಹಳ್ಳಿ ರಾಮಾಜ್ಜ ಉದ್ಘಾಟಸಿದರು. ಕೆ.ವಿರುಪಾಕ್ಷ , ನಿವೃತ್ತ ಪ್ರಾಚಾರ್ಯ ಐ.ಜಿ.ಚಂದ್ರಶೇಖರಯ್ಯ, ರಾಮ ಗುರೂಜಿ, ಕಡೂರು ಶೈಲ ಶಿವಣ್ಣ , ಕಡೂರು ಬಿಜೆಪಿ ಮಂಡಲ ಅಧ್ಯಕ್ಷ ಬಿ.ಟಿ.ದೇವಾನಂದ ಎಮ್.ಆರ್.ಪ್ರಕಾಶ್, ಹೊಸೂರು ಪುಟ್ಟರಾಜು ಚೌಳಹಿರಿಯೂರ ಗ್ರಾಪಂ ಸದಸ್ಯರು, ಸಾಣೇಹಳ್ಳಿ ಸಲಹಾಸಮಿತಿ ಸದಸ್ಯ ಕುರುಬರಹಳ್ಳಿ ಪ್ರಕಾಶ್ ಉಪಸ್ಥಿತರಿದ್ದರು.