ದುರುದ್ದೇಶದಿಂದ ಸಿಎಂ ಮೇಲೆ ಮುಡಾ ಹಗರಣ ಆರೋಪ

k-harishgowda
Published on

ಸಿದ್ದರಾಮಯ್ಯ ಅವರ ಮೇಲೆ ಒಂದೇ ಒಂದು ಸಣ್ಣ ಆರೋಪ ಇರಲಿಲ್ಲ. ಅವರ ಮೇಲೆ ದುರುದ್ದೇಶದಿಂದಲೇ ಮುಡಾ ಆರೋಪ ಮಾಡುತ್ತಿದ್ದರು. ಪ್ರಕರಣ ಸಂಬಂಧ ಲೋಕಾಯುಕ್ತ ನೀಡಿರುವ ವರದಿಯಿಂದ ಅವರು ಮಾನಸಿಕವಾಗಿ ಮತ್ತಷ್ಟು ಗಟ್ಟಿಯಾಗಿದ್ದಾರೆ ಎಂದು ಶಾಸಕ ಕೆ.ಹರೀಶ್‌ಗೌಡ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಕುಟುಂಬಕ್ಕೆ ಲೋಕಾಯುಕ್ತ ಕ್ಲೀನ್‌ಚಿಟ್ ನೀಡಿರುವ ವಿಚಾರ ಸರಿಯಾಗಿದೆ. ಸಿದ್ದರಾಮಯ್ಯರ ಪಾತ್ರ ಇದರಲ್ಲಿ ಎಲ್ಲೂ ಇಲ್ಲ ಅಂತ ಹೇಳಿದ್ದೆ. ಈಗ ನಮಗೆಲ್ಲರಿಗೂ ಸಂತೋಷವಾಗಿದೆ ಎಂದರು.

ಸಿದ್ದರಾಮಯ್ಯ ಅವರು ಇನ್ನೂ 10 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿರುತ್ತಾರೆ. 45 ವರ್ಷಗಳಿಂದ ರಾಜಕೀಯಮಾಡಿಕೊಂಡು ಬಂದಿರುವ ಸಿದ್ದರಾಮಯ್ಯ ಅವರು ಮನಸ್ಸು ಮಾಡಿದ್ದರೆ 14 ಅಲ್ಲ, 1400 ನಿವೇಶನಗಳನ್ನು ಮಾಡಬಹುದಾಗಿತ್ತು. ಅವರು ಇಳಿ ವಯಸ್ಸಿನಲ್ಲಿ ಒಂದು ಮನೆಯನ್ನು ಕಟ್ಟುತ್ತಿದ್ದಾರೆ. ಲೋಕಾಯುಕ್ತ ರಾಜ್ಯ ಸರ್ಕಾರದ ಅಧೀನದಲ್ಲಿದೆ ಎನ್ನುವುದನ್ನು ವಿರೋಧಿಗಳು ಹೇಳುತ್ತಾರೆ. ತಪ್ಪು ಮಾಡಿದ್ದರೆ ಯಾರನ್ನು ಬಿಡುವುದಿಲ್ಲ. ಯಾರ ಪ್ರಭಾವಕ್ಕೂ ಒಳಗಾಗಿಲ್ಲ. ಸಿಎಂ ಅವರು ಉತ್ತಮವಾಗಿ ಕೆಲಸ ಮಾಡುತ್ತಾ ರಾಜ್ಯದ ಅಭಿವೃದ್ಧಿಪಡಿಸುತ್ತಿದ್ದಾರೆ. ಮುಂದಿನ ಹತ್ತು ವರ್ಷಗಳ ಕಾಲ ಅವರೇ ಮುಂದುವರಿಯಬೇಕು ಎಂದರು.

ಕೆಆರ್‌ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವುದಕ್ಕೆ ನಾನು ಈಗಲೂ ಬದ್ಧ. ಅದನ್ನು ವಿರೋಧ ಮಾಡುವವರಲ್ಲಿ ನಾನು ಕೋರಿಕೊಳ್ಳುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net