ದೀರ್ಘಾ ಕಾಲದ ರಜಾದಿನಗಳಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮ ಅಗತ್ಯ / ಎಸ್.ಪಿ. ಬಿ.ನಿಖಿಲ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ನಾಗರೀಕರು ದೀರ್ಘ ವಾರಾಂತ್ಯ ಮತ್ತು ಬೇಸಿಗೆ ರಜಾದಿನಗಳಿಗಾಗಿ ಮನೆಯಿಂದ ಹೊರಡುವ ಮೊದಲು ಎಲ್ಲಾ ಬಾಗಿಲುಗಳನ್ನು ಮತ್ತು ಕಿಟಕಿಗಳು ಲಾಕ್ ಅಗಿವೆಯೇ ಎಂಬುವುದನ್ನು ಎರಡೆರೆಡು ಬಾರಿ ಪರಿಶೀಲಿಸಬೇಕು. ನಾಗರೀಕರು ಪ್ರವಾಸಕ್ಕೆ ಹೊರಡುವ ಮೊದಲು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ವಿವರಗಳನ್ನು ಹಾಗೂ ತಮ್ಮ ದೂರವಾಣಿ ಸಂಖ್ಯೆ ನಮೂದಿಸುವುದು ಮತ್ತು ಠಾಣಾ ಅಧಿಕಾರಿಯ ದೂರವಾಣಿ ಸಂಖ್ಯೆಯನ್ನು ಪಡೆದುಕೊಳ್ಳಬೇಕು. ಅನುಕೊಲಕರವಾಗಿ ಇರುವರು ಸಾಧ್ಯವಾದರೆ ಭಧ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಿ ಅಥವಾ ನಿಮ್ಮ ವಿಶ್ವಾಸಾರ್ಹ ನೆರೆಹೊರೆಯವರಿಗೆ ತಿಳಿಸಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಎಸ್.ಪಿ.ಬಿ.ನಿಖಿಲ್ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿ, ಮನೆಯಿಂದ ಹೊರಗೆ ಬೇರೆ ಊರಿಗೆ ಹೋಗುವಾಗ ಮನೆಯಲ್ಲಿ ಬೆಲೆಬಾಳುವಂತ ಚಿನ್ನಾಭರಣ, ನಗದು ಹಣ ಮುಂತಾದ ವಸ್ತುಗಳನ್ನು ಇಡದೆ ಬ್ಯಾಂಕಿನ ಲಾಕರ್‌ಗಳಲ್ಲಿ ಇಡುವುದು ಸೂಕ್ತ. ಮನೆಗೆ ಡೋರ್ ಲಾಕ್ ಮಾಡುವುದು ಸೂಕ್ತಕರ. ಹಾಗೂ ಕೀಗಳನ್ನು ಮನೆಯ ಹೊರಗಿನ ಹೂ ಕುಂಡ, ಪಾದರಕ್ಷೆ, ಅಥವಾ ಡೋರ್ ಮ್ಯಾಟ್ ಕೆಳಗೆ ಬಚ್ಚಿಡುವುದು ಅಪಾಯಕರ. ಮನೆಯ ಮುಖ್ಯ ಗೇಟ್‌ಗೆ ನೇತಾಡುವ ಹಾಗೆ ಬೀಗ ಹಾಕುವುದು ಬೇಡ, ತಾವು ಬರುವವರೆಗೂ ಮನೆಗೆ ಹಾಲು, ನ್ಯೂಸ್ ಪೇಪರ್‌ಗಳನ್ನು ಹಾಕದಂತೆ ಸೂಚಿಸ ಬೇಕು, ಆನ್ ಲೈನ್‌ನಲ್ಲಿ ಬುಕಿಂಗ್ ಮಾಡಿರುವ ವಸ್ತುಗಳನ್ನು ತಾವು ಬರುವವರೆಗೆ ಮುಂದೂಡಲು ಪ್ರಯತ್ನಿಸ ಬೇಕು ಎಂದು ಕಿವಿ ಮಾತು ಹೇಳಿದ್ದಾರೆ.

ಮನೆಗಳಿಗೆ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಿ ಹಾಗೂ ಅದು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂಬುವುದನ್ನು ಖತರಿಪಡಿಸಿ ಕೊಳ್ಳಿ ಮನೆ ಒಳಗೆ ಯಾರದರೂ ಇದ್ದಾರೆ ಎಂಬ ಭಾವನೆ ಮೂಡಿಸಲು ಮನೆಯೊಳಗಿನ ಒಂದು ವಿದ್ಯುತ್ ದೀಪವನ್ನು ಆನ್ ಮಾಡಿ ಹೋಗುವುದು ಸೂಕ್ತ ಎಂದು ತಿಳಿಸಿದ್ದಾರೆ.

ಚಿತ್ರ ೧೧ ಕೆ.ಎಲ್.ಆರ್. ೦೨ : ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್ ಚಿತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net