

ಸುರಪುರ : ದಾಸೋಹ ಪರಿಕಲ್ಪನೆ ಇಡೀ ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟವರು ೧೨ನೇ ಶತಮಾನದ ಶರಣರು ಎಂದು ಪ್ರೌಢಶಾಲೆ ಶಿಕ್ಷಕ, ಸಾಹಿತಿ ಕನಕಪ್ಪ ವಾಗಣಿಗೇರಿ ಹೇಳಿದರು.
ಕಬಾಡಗೇರದ ಕಡ್ಲಪ್ಪನವರ ಮಠದಲ್ಲಿ ಶ್ರಾವಣ ಮಾಸ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಅಂಕು-ಡೊAಕು ತಿದ್ದುವ ಜತೆಗೆ ಒಡಲ ಬಾಧೆ ನೀಗಿಸಲು ದಾಸೋಹ ಉತ್ತಮ ಸಾಧನವಾಗಿದೆ ಎಂಬುದನ್ನು ಶರಣರು ತಮ್ಮ ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದರು.
ಪೀಠಾಧಿಪತಿ ಶ್ರೀ ಪ್ರಭುಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ, ರೈತ ಮುಖಂಡ ಎ.ಜಿ. ಪಾಟೀಲ್ ಕಿರದಳ್ಳಿ, ಚನ್ನಬಸಯ್ಯ ಜಟಗಿಮಠ, ಮೋಹನರೆಡ್ಡಿ, ಸುಭಾಷ ಹೂಗಾರ, ಎಚ್.ವೈ. ರಾಠೋಡ್, ಡಾ.ಪುರತಗಿರಿ, ನೂರಂದಯ್ಯ ಸ್ಥಾವರಮಠ, ಸಂಗಯ್ಯ ಸ್ವಾಮಿ ಕಡ್ಲಪ್ಪನವರ ಮಠ, ಶರಣಪ್ಪ ಕಮ್ಮಾರ, ಸಿದ್ಧಲಿಂಗಯ್ಯ ಕಡ್ಲಪ್ಪನವರಮಠ ಇತರರಿದ್ದರು.
ವೆಂಕಟೇಶ ಪಾಟೀಲ್ ಸ್ವಾಗತಿಸಿದರು. ದೇವು ಎಸ್.ಹೆಬ್ಬಾಳ ನಿರೂಪಣೆ ಮಾಡಿದರು. ಶರಣಪ್ಪ ಕಮ್ಮಾರ ವಂದಿಸಿದರು. ಕಲಾವಿದರಾದ ಮೋಹನರಾವ್ ಮಾಳದಕರ ಅವರ ತಂಡ ಸಂಗೀತ ಸೇವೆ ಸಲ್ಲಿಸಿತು.