ದಾದಿಯರು ಆಸ್ಪತ್ರೆಯ ಬೆನ್ನೆಲುಬು

1
Published on

ಯಾವುದೇ ಆಸ್ಪತ್ರೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ದಾದಿಯರು ಆಸ್ಪತ್ರೆಯ ಬೆನ್ನೆಲುಬಾಗಿ ನಿಂತು ಸೇವೆ ಸಲ್ಲಿಸುತ್ತಾರೆ ಎಂದು ವೈದ್ಯಾಧಿಕಾರಿ ಡಾ.ಬಿ.ಎನ್.ಶಿಲ್ಪಶ್ರೀ ಹೇಳಿದರು.

ಕುವೆಂಪುನಗರದ ಬಿಜಿಎಸ್ ಇಂಟರ್ ನ್ಯಾಷನಲ್ ೌಂಡೇಷನ್ ಾರ್ ಹೆಲ್ತ್‌ಸೈನ್ಸ್, ಅಪೋಲೋ ಆಸ್ಪತ್ರೆಯ ವತಿಯಿಂದ ಸೋಮವಾರ ಆಂೋಜಿಸಿದ್ದ ಅಂತಾರಾಷ್ಟ್ರೀಯ ದಾದಿಂುರ ದಿನ ಕಾಂರ್ುಕ್ರಮವನ್ನು ಉದ್ಘಾಟಿಸಿ ವಾತನಾಡಿದರು.

ರೋಗಿಗಳ ಪಾಲಕರು ಹಾಗೂ ರೋಗಿಗಳಿಂದ ಎಷ್ಟೇ ಒತ್ತಡ ಎದುರಾದರೂ ದಾದಿಯರು ಮಾತ್ರ ನಗು ಮುಖದ ಸೇವೆ ನೀಡಬೇಕು. ದಾದಿಯರ ಮುಖದಲ್ಲಿ ನಗು ಇದ್ದರೆ ರೋಗಿಗಳ ಆರೋಗ್ಯ ಸ್ಥಿತಿ ಬೇಗನೆ ಸುಧಾರಿಸುತ್ತದೆ ಎಂದರು.

ಹುಟ್ಟಿನಿಂದ ಹಿಡಿದು ಬದುಕು ಮುಗಿಸುವವರೆಗೆ ವಿವಿಧ ಹಂತಗಳಲ್ಲಿ ಅವರ ಕೆಲಸ ಬೆಲೆ ಕಟ್ಟಲಾಗದ್ದು. ಹುಟ್ಟು-ಸಾವಿನ ನಡುವಿನ ಬದುಕಲ್ಲಿ ಅವರ ಹೋರಾಟಕ್ಕೆ ನಾವು ಅವರೊಂದಿಗೆ ಕೈಜೋಡಿಸಬೇಕು. ಅವರಲ್ಲಿ ಹೇಳದೆ ಉಳಿದು ಹೋದ ನೋವುಗಳಿಗೆ ಧನಿಂಾಗಬೇಕು. ಅವರ ಕೆಲಸವನ್ನು ಹಾಡಿ ಹೊಗಳದಿದ್ದರೂ ಪರವಾಗಿಲ್ಲ. ಅವರೊಂದಿಗೆ ನೀಚ ವರ್ತನೆ ತೋರದೆ ಸಭ್ಯವಾಗಿದ್ದಲ್ಲಿ ಅದಕ್ಕಿಂತ ಬೇರೆ ಕೊಡುಗೆ ಮತ್ತೂಂದಿಲ್ಲ ಎಂದರು.

ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಭಾನವಿ ಆಸ್ಪತ್ರೆಂು ನರ್ಸಿಂಗ್ ಸೂಪರಿಂಟೆಂಡೆಂಟ್ ಕೆ.ಎಸ್.ನಿರಂಜನಸ್ವಾಮಿ, ಹಿರಿಂು ವೈದ್ಯ ಸಾಹಿತಿ ಸಿ.ಆರ್.ಸಚಿನ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net