ದಸರಾ ವಸ್ತು ಪ್ರದರ್ಶನಕ್ಕೆ ಸಿಎಂ ಚಾಲನೆ

78
Published on

ಮೈಸೂರು ದಸರಾ ಮಹೋತ್ಸವ 2025 ರ ದಸರಾ ವಸ್ತು ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಿದರು.

ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಐ. ಎನ್.ಎಸ್ ಕದಂಬ ಸೇನಾ ಸಿಬ್ಬಂದಿಗಳು ಬ್ಯಾಂಡ್ ಸೆಟ್ ಮೂಲಕ ವಿಶೇಷವಾಗಿ ಗೌರವ ಸಲ್ಲಿಸಿದರು.

ನಂತರ ಈ ಬಾರಿ ವಸ್ತು ಪ್ರದರ್ಶನದಲ್ಲಿ ಪ್ರವಾಸಿಗರ ತನ್ನತ್ತ ಸೆಳೆಯುವ ವಿಶೇಷ ಅಜೀಜ್ ಸೇಠ್ ಸಂಗೀತ ಕಾರಂಜಿಯನ್ನೂ ಚಾಲನೆ ನೀಡಿದರು, ಆವರಣದಲ್ಲಿ 20 ಕೋಟಿ ಅನುದಾನದಲ್ಲಿ ನೂತನವಾಗಿ ನಿರ್ಮಿಸಿರುವ ಸಿದ್ದರಾಮಯ್ಯ ಅಂಗಳ ಹೆಸರಿನ ಶಾಶ್ವತ ಮಳಿಗೆಗಳನ್ನು ಉದ್ಘಾಟಿಸಿ ಸಚಿವರು ಶಾಸಕರೊಡನೆ ವೀಕ್ಷಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net