ದಸರಾ ಮೆರವಣಿಗೆ ಮತ್ತು ಪಂಜಿನ ಕವಾಯತು ಉಪಸಮಿತಿ ಪ್ರಶಸ್ತಿ

dasara_ police band (2)
Published on

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕಲಾತಂಡಗಳಿಗೆ ದಸರಾ ಮೆರವಣಿಗೆ ಮತ್ತು ಪಂಜಿನ ಕವಾಯತು ಉಪಸಮಿತಿ ಪ್ರಶಸ್ತಿ ಘೋಷಿಸಿದೆ.

ಉಡುಪಿ ಜಿಲ್ಲೆಯ ಪಡು ಬೈಲೂರಿನ ಮಹಾಲಿಂಗೇಶ್ವರ ಹುಲಿವೇಶ ತಂಡಕ್ಕೆ ಪ್ರಥಮ ಬಹುಮಾನ ಘೋಷಿಸಲಾಗಿದ್ದು, 15 ಸಾವಿರ ರೂ. ಬಹುಮಾನದ ಮೊತ್ತವಾಗಿದೆ. ಹಾಗೆಯೇ ಚಾಮರಾಜನಗರ ಜಿಲ್ಲೆಯ ಕನಕದಾಸ ಗಿರವರ ಕುಣಿತ ಕಲಾ ಸಂಘ ಮತ್ತು ಮೈಸೂರಿನ ಸರಪಣಿ ಮೈಲಾರ ಲಿಂಗೇಶ್ವರ ಗೊರವರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ತಲಾ 5 ರೂ. ಸಾವಿರ ಬಹುಮಾನದ ಮೊತ್ತವಾಗಿದೆ.

ಉಳಿದಂತೆ ಬೀದರ್‌ನ ಪಾರ್ವತಿ ಮಲ್ಲಪ್ಪಾ ಸಂಗೋಳಗೆ ತಂಡ ಮತ್ತು ಯಾದಗಿರಿಯ ಗಾಮಧಿ ನಗರ ತಾಂಡಾತಂಡ ತೃತೀಯ ಸ್ಥಾನ ಪಡೆದಿದ್ದು, ತಲಾ 2.500 ರೂ. ಬಹುಮಾನ ಘೋಷಿಸಲಾಗಿದೆ ಎಂದು ದಸರಾ ಮೆರವಣಿಗೆ ಮತ್ತು ಪಂಜಿನ ಕವಾಯತು ಉಪಸಮಿತಿ ಉಪ ವಿಶೇಷಾಧಿಕಾರಿ ಸೀಮಾ ಲಾಟ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುರುವಾರ ನಡೆದ ವಿಜಯ ದಶಮಿ ಮೆರವಣಿಗೆಯಲ್ಲಿ 60 ಸ್ತಬ್ಧಚಿತ್ರಗಳು ಹಾಗೂ 90ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಿ, ಮೆರವಣಿಗೆಗೆ ಮೆರುಗು ನೀಡಿದ್ದವು. ಈ ವೇಳೆ ಅತ್ಯುತ್ತಮ ಪ್ರದರ್ಶನ ನೀಡಿದ ಕಲಾತಮಡಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net