ಜಂಬೂಸವಾರಿಗೆ 300 ಜನ
ದಸರಾ ಉದ್ಘಾಟನೆಗೆ 200
ಕರೊನಾ ಮೈಸೂರಿನಲ್ಲಿ ನಿಯಂತ್ರಣ ಮೀರಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಜ್ಞರಿಂದ ವರದಿ ಕೇಳಿದ್ದರು. ಆ ಹಿನ್ನೆಲೆಯಲ್ಲಿ ಡಾ.ಸುದರ್ಶನ್ ಅಧ್ಯಕ್ಷತೆಯ ತಂಡ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭೇಟಿ ಮಾಡಿತ್ತಲ್ಲದೆ, ಜಿಲ್ಲೆಯ ಅಧಿಕಾರಿಗಳೊಂದಿಗೆ ಚಾಮುಂಡಿ ಬೆಟ್ಟ, ಅರಮನೆಗೆ ತೆರಳಿ ಪರಿಶೀಲನೆ ನಡೆಸಿತ್ತು.
ಡಾ.ಎಂ.ಕೆ.ಸುದರ್ಶನ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಮೈಸೂರಿನಲ್ಲಿ ಸಭೆ ನಡೆಸಿರುವ ಸಮಿತಿ. ಮೈಸೂರು ದಸರಾ ಆರಂಭದ ದಿನವಾದ ಅ.17ರಿಂದ ಜಂಬೂಸವಾರಿ ದಿನವಾದ ಅ.26ರ ತನಕ ಎಷ್ಟು ಜನ ಸೇರಬೇಕು, ಏನೇನು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕೆಂದು ಕೂಲಂಕಷವಾಗಿ ಚರ್ಚಿಸಿ ಸರ್ಕಾರಕ್ಕೆ ವರದಿ ನೀಡಿದೆ. ಸಮಿತಿಯ ಕಾರ್ಯದರ್ಶಿ ಡಾ.ಮೊಹಮ್ಮದ್ ಷರ್ೀ, ಸದಸ್ಯ ಡಾ.ಲೋಕೇಶ್ ಅಲಹರಿ ಇದ್ದರು.
ಮೈಸೂರು ದಸರಾ ಉತ್ಸವವನ್ನು ಕರೊನಾ ನಿಯಂತ್ರಣದ ಮುನ್ನೆಚ್ಚರಿಕೆ ತೆಗೆದುಕೊಂಡು ಸಾರ್ವಜನಿಕರಿಗೆ ಅವಕಾಶ ನೀಡದೆ ಸರಳವಾಗಿ ಆಚರಿಸುವ ಕುರಿತು ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಾರಸು ಮಾಡಿದೆ.
ವಿಜಯವಾಣಿ ಸುದ್ದಿಜಾಲ ಬೆಂಗಳೂರು
-ಮೈಸೂರು ನಗರದ ಆಯ್ದ ಸ್ಥಳಗಳಲ್ಲಿ ಸಂಜೆ 7ರಿಂದ ರಾತ್ರಿ 9ರವರೆಗೆ 10 ದಿನ ಕಾಲ ವಿದ್ಯುದ್ದೀಪಾಲಂಕಾರ ವ್ಯವಸ್ಥೆ ವೀಕ್ಷಣೆ ವೇಳೆ ಜನಸಂದಣಿ ಉಂಟಾಗದಂತೆ ಪೊಲೀಸರು ಎಚ್ಚರ ವಹಿಸಬೇಕು. ಪ್ರೇಕ್ಷಕರು ೇಸ್ ಮಾಸ್ಕ್ ಧರಿಸಿರುವುದನ್ನು ಪರಿಶೀಲಿಸಬೇಕು.
-ಮೈಸೂರು ಅರಮನೆಯಲ್ಲಿ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ದಿನಕ್ಕೆ 2 ಗಂಟೆಗೆ ಸೀಮಿತಗೊಳಿಸಬೇಕು. ಸ್ಥಳೀಯ ಕಲಾವಿದರು 50 ಮೀರಬಾರದು.
-ಅ.17ರಂದು ಚಾಮುಂಡಿ ಬೆಟ್ಟದಲ್ಲಿ ಸಿಎಂ ಉದ್ಘಾಟಿಸಲಿರುವ ಕಾರ್ಯಕ್ರಮಕ್ಕೆ ಅಧಿಕಾರಿಗಳು, ಕಲಾವಿದರು, ರಕ್ಷಣಾ ಸಿಬ್ಬಂದಿ ಸೇರಿ 200 ಮಂದಿಗೆ ಸೀಮಿತ.
ಶಿಾರಸುಗಳೇನು?
ಸಾಮಾನ್ಯ ಪರಿಗಣನೆಗಳು