

ದಲೈಲಾಮಾ ಅವರ ಪುನರ್ಜನ್ಮವನ್ನು ಗುರುತಿಸುವ ಅಧಿಕಾರ ಅಥವಾ ಯಾವುದೇ ಐತಿಹಾಸಿಕತೆ, ನೈತಿಕ ಕಾನೂನು ಬದ್ಧತೆ ಚೀನಾಗೆ ಇಲ್ಲ ಎಂದು ಟಿಬೆಟಿಯನ್ ನಿರಾಶ್ರಿತರ ಶಿಬಿರಗಳ ಮುಖಂಡರು ಆಕ್ಷೇಪಿಸಿದರು.
ಪುನರ್ಜನ್ಮ ಪಡೆದ ಲಾಮಾಗಳನ್ನು ಗುರುತಿಸುವ ಅಭ್ಯಾಸ ಬೌದ್ಧ ಧರ್ಮದ ವಿಶಿಷ್ಟವಾದ ಪ್ರಾಚೀನ ಆಧ್ಯಾತ್ಮಿಕ ಸಂಪ್ರದಾಯವಾಗಿದೆ. ಆದರೆ, ಈಗ ಚೀನಾ ಮಧ್ಯಪ್ರವೇಶಿಸಿರುವುದು ಸರಿಯಲ್ಲ. ಟಿಬೆಟಿಯನ್ನರ ಮೇಲೆ ಚೀನಾ ಕಾನೂನುಬಾಹಿರ ಆಕ್ರಮಣ, ಟಿಬೆಟಿಯನ್ ಧರ್ಮ ಮತ್ತು ಸಂಸ್ಕೃತಿಯ ವ್ಯವಸ್ಥಿತ ದಮನ ಮುಂದುವರಿಸಿದೆ. ಈಗ ಪುನರ್ಜನ್ಮದ ಪವಿತ್ರ ವಿಚಾರದಲ್ಲಿ ಭಾಗಿಯಾಗುವ ಯಾವುದೇ ಕಾನೂನು ಬದ್ಧತೆ ಅಥವಾ ನೈತಿಕತೆ ಹೊಂದಿಲ್ಲ ಎಂದು ಬೈಲುಕುಪ್ಪೆ ಟಿಬಿಟಿಯನ್ ಯುವ ಕಾಂಗ್ರೆಸ್ ಪದಾಧಿಕಾರಿ ತ್ಸೆರಿಂಗ್ ಯುಡೆನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.