

ಎನ್.ಆರ್.ಪುರ: ಸರ್ಕಾರಿ ಆದೇಶದ ಪ್ರಕಾರ ಪರಿಶಿಷ್ಟ ಜಾತಿ ಜನಾಂಗದವರ ಜನಗಣತಿ ನಡೆಸಲು ಜಸ್ಟೀಸ್ ನಾಗಮೋಹನ್‌ದಾಸ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದು, ಅದರ ಪ್ರಕಾರ ತಹಸೀಲ್ದಾರ್ ಅವರು ಪರಿಶಿಷ್ಟ ಜಾತಿ ಜನಾಂಗದವರ ಜನಗಣತಿ ಮಾಡುವಾಗ ಸ್ಥಳೀಯ ದಲಿತ ಮುಖಂಡರ ಸಮ್ಮುಖದಲ್ಲೇ ಮಾಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ತನುಜಾ ಟಿ.ಸವದತ್ತಿ ಅವರಿಗೆ ದಲಿತ ಮುಖಂಡರು ಮನವಿ ಸಲ್ಲಿಸಿದರು.
ಉಪ ಜಾತಿಗಳನ್ನು ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂದ್ರ, ಛಲವಾದಿ ಎಂದು ಪರಿಶೀಲಿಸಿ ನೋಂದಣಿ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೂ ಮುನ್ನ ಸಮಾಜ ಕಲ್ಯಾಣ ಇಲಾಖೆ, ಬಿಇಒ ಕಚೇರಿ ಹಾಗೂ ಪೊಲೀಸ್ ಠಾಣೆಗೂ ಮನವಿ ಸಲ್ಲಿಸಿದರು. ವಾಲ್ಮೀಕಿ ನಾಯಕ ಸಂಘದ ಶೃಂಗೇರಿ ಕ್ಷೇತ್ರಾಧ್ಯಕ್ಷ ಎ.ಸಿ.ಶ್ರೀನಿವಾಸ್, ಶೃಂಗೇರಿ ಕ್ಷೇತ್ರದ ಛಲವಾದಿ ಮಹಾಸಭಾ ಅಧ್ಯಕ್ಷ ಡಿ.ರಾಮು, ಡಿಎಸ್‌ಎಸ್ ಜಿಲ್ಲಾ ಸಂಚಾಲಕಿ ಪವಿತ್ರಾ, ಡಿಎಸ್‌ಎಸ್ ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ರಾಗಿಣಿ, ಗ್ರಾಮ ಸಂಚಾಲಕ ಸಿಜು, ಗ್ರಾಮ ಕಾರ್ಯದರ್ಶಿ ಸಾಜು ಹಾಗೂ ಪದಾಧಿಕಾರಿಗಳು ಇದ್ದರು.