

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಒಡೆತನದ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇ.ಡಿ.ದಾಳಿ ಮಾಡುವ ಮೂಲಕ ಶಿಕ್ಷಣ ತಜ್ಞರ ದಮನ ವಾಡುತ್ತಿದೆ ಎಂದು ಆರೋಪಿಸಿ ದಲಿತ ಮಹಾಸಭಾದ ವತಿಯಿಂದ ಪುರಭವನ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಜಾರಿ ನಿರ್ದೇಶನಾಲಯವನ್ನು ಬಿಜೆಪಿ ತನ್ನ ಅಸ ವಾಡಿಕೊಂಡಿದೆ. ಬಿಜೆಪಿ ದಲಿತ ನಾಯಕರನ್ನು ಕಾಂಗ್ರೆಸ್‌ನಿಂದ ಬಿಡಿಸಿ ಬಿಜೆಪಿಗೆ ಸೇರ್ಪಡೆ ವಾಡಿಕೊಳ್ಳಲು ಇಡಿ, ಐಟಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಇಲ್ಲಿಯವರೆಗೂ 60 ಸಾವಿರ ಇಂಜಿನಿಯರ್, 30 ಸಾವಿರ ವೈದ್ಯರು, ಸಾವಿರಾರು ಪದವೀಧರರಿಗೆ ಶಿಕ್ಷಣ ನೀಡಿದೆ. ಈ ಸಂಸ್ಥೆಗೆ ಮಸಿ ಬಳಿಯಲು, ಸಂಸ್ಥೆಯನ್ನು ಮುಗಿಸಲು ಬಿಜೆಪಿ ಸರ್ಕಾರ ಇಡಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ.
ಜಿ.ಪರಮೇಶ್ವರ್ ಅವರು ಸರಳತೆ, ಪ್ರಾವಾಣಿಕತೆಗೆ ಹೆಸರುಳ್ಳ ನಾಯಕರಾಗಿದ್ದಾರೆ. ದಲಿತನಾಯಕರಾಗಿ ಕರ್ನಾಟಕದಾದ್ಯಂತ ಜನಪ್ರಿಯ ನಾಯಕತ್ವವನ್ನು ಕೆಡವಿಹಾಕಲು ಇಡಿ ಅಧಿಕಾರಿಗಳನ್ನು ಛೂ ಬಿಟ್ಟು, ದಲಿತ ನಾಯಕನ ಮುಗಿಸಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಕಿಡಿಕಾರಿದರು.
ಮಹಾಸಭಾ ಅಧ್ಯಕ್ಷ ಎಸ್.ರಾಜೇಶ್, ದಸಂಸ ಮೈಸೂರು ವಿಭಾಗೀಯ ಸಂಚಾಲಕ ಶಿವಣ್ಣ ಹಾಗೂ ಕೇಶವ, ಮೋಹನ್‌ಕುವಾರ್, ಪ್ರಮೋದ್, ಎಸ್.ಎ.ರಹೀಂ, ರಾಮು, ಕಂಬ್ರಾನ್ ಪಾಷ, ರವಿ, ಶ್ರೀನಿವಾಸ್ ಇದ್ದರು.