ದರೋಡೆಗೆ ಸಂಚು- ದನ ಕಳವು ನಟೋರಿಯಸ್ ಗ್ಯಾಂಗ್ ಪೊಲೀಸ್ ಬಲೆಗೆ

Published on

ಮಂಗಳೂರು: ಕರಾವಳಿ ಭಾಗದಲ್ಲಿ ದರೋಡೆ ಮತ್ತು ದನಗಳವು ಮಾಡುತ್ತಿದ್ದ ನಟೋರಿಯಸ್ ಗ್ಯಾಂಗ್‌ನ್ನು  ಬಜಪೆ ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ರಾತ್ರಿ ಗಂಜಿಮಠ ಕೈಗಾರಿಕಾ ಪ್ರದೇಶದಲ್ಲಿ ದರೋಡೆ ಕೃತ್ಯ ನಡೆಸಲು ಹೊಂಚು ಹಾಕುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಬಜಪೆ ಠಾಣಾ ಪೊಲೀಸರು 5 ಜನ ಆರೋಪಿಗಳು ಕೃತ್ಯಕ್ಕೆ ಬಳಿಸಿರುವ ಪಿಕ್ ಅಪ್ ವಾಹನ 1, ಬೈಕ್ 2, ಕಬ್ಬಿಣದ ಕತ್ತಿ, ಚೂರಿ, ಕಬ್ಬಿಣದ ಹುಕ್ಕು, ಮರದ ದಿಮ್ಮಿ, ಮೆಣಸಿನ ಹುಡಿ ಪ್ಯಾಕೇಟ್, 4 ಮೊಬೈಲ್ ಫೋನ್, 2 ಜೀವಂತ ದನಗಳನ್ನು ಮತ್ತು ದನವನ್ನು ಮಾರಾಟ ಮಾಡಿದ 15,000 ರೂ.  ಸಮೇತ ಒಟ್ಟು 6 ಲಕ್ಷ ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.
ಮೂಲರಪಟ್ಣ ಗೋರಿಹಿತ್ಲು ನಿವಾಸಿಗಳಾದ ಅಬ್ದುಲ್ ಹಕೀಂಬೊಗ್ಗು (33), ಅಬ್ದುಲ್ ರಜಾಕ್ (45), ಮೊಹಮ್ಮದ್ ಮನ್ಸೂರು (29), ಇರ್ಫಾನ್ (31) ಬಂಧಿತರು.
 ಮೂಡಬಿದ್ರೆ, ಎಡಪದವು, ಮಿಜಾರು, ಗಂಜಿಮಠ ಕಡೆಗಳಲ್ಲಿ ದನಗಳನ್ನು ಕೈಕಾಲು ಕಟ್ಟಿ ಕಳ್ಳತನ ಮಾಡಿ ಕೊಂಡುಹೋಗುತ್ತಿದ್ದು,  ಕಳ್ಳತನ ಮಾಡಲು ಯಾರಾದರೂ ವ್ಯಕ್ತಿಗಳು ಪ್ರತಿರೋದ ವ್ಯಕ್ತಪಡಿಸಿದಲ್ಲಿ ಅವರ ಕಣ್ಣಿಗೆ  ಮೆಣಸಿನಹುಡಿಯನ್ನು ಹಾಕಿ ಚೂರಿಯನ್ನು ತೋರಿಸಿ ಹೆದರಿಸುತ್ತಿದ್ದರು. ಇವರ ಗ್ಯಾಂಗ್‌ನಲ್ಲಿ ಅದ್ಯಪಾಡಿ ಮನ್ಸೂರು, ತೋಡಾರು ಫಾಯಿಜ್ಬೆಬ್ಬೆ ಪೈಜ್, ಜುಬೈರ್ ತೋಡಾರು, ಇರ್ಪಾದ್ ಮತ್ತು ನೌಪಾಲ್ ಗಂಜಿಮಠ  ಪೊಲೀಸರ ದಾಳಿ ವೇಳೆ ತಪ್ಪಿಸಿಕೊಂಡು ಓಡಿಹೋಗಿದ್ದು, ಪತ್ತೆಯ ಬಗ್ಗೆ ತೀವ್ರ ಕಾರ್ಯಚರಣೆ ನಡೆಸಲಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net