ದಂಪತಿಗಳ ಮೇಲೆ ಹರಿದ ಖಾಸಗಿ ಬಸ್ಸು / ಪತ್ನಿ ಸ್ಥಳದಲ್ಲೇ ಸಾವು / ಪತಿ ಆಸ್ಪತ್ರೆಗೆ ದಾಖಲು

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ರಸ್ತೆ ದಾಟುತ್ತಿದ್ದ ದಂಪತಿ ಪಾದಚಾರಿಗಳಿಬ್ಬರ ಮೇಲೆ ಖಾಸಗಿ ಬಸ್ಸು ಹರಿದು ಪತ್ನಿ ರಾಮಕ್ಕ (೫೩) ಸ್ಥಳದಲ್ಲೇ ಮೃತಪಟ್ಟರೆ ಗಂಡ ಶ್ರೀನಿವಾಸ್ (೬೫) ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ದಂಪತಿಗಳಿಬ್ಬರು ಬಂಗಾರಪೇಟೆ ತಾಲ್ಲೂಕು, ನಾಯಕರಹಳ್ಳಿ ಗ್ರಾಮದವರಾಗಿದ್ದು, ಮಂಗಳವಾರ ಮಧ್ಯಾಹ್ನ ೧೧ ಗಂಟೆಯ ಸಂದರ್ಭದಲ್ಲಿ ನಗರದ ಮೆಕ್ಕೆ ವೃತ್ತದಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಭಾರತಿ ಎಂಬ ಖಾಸಗಿ ಬಸ್ಸಿನ ಚಕ್ರಕ್ಕೆ ದಂಪತಿಗಳಿಬ್ಬರು ಸಿಕ್ಕಿ ಸ್ಥಳದಲ್ಲಿಯೇ ರಾಮಕ್ಕ ಮೃತಪಟ್ಟಿದ್ದಾರೆ. ಗಂಡ ಶ್ರೀನಿವಾಸ್‌ಗೆ ತೀವ್ರತರವಾದ ಗಾಯಗಳಾಗಿದ್ದು, ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಸಂಬAಧ ಚಾಲಕ ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಅನಿಲ್ (೨೭) ಎಂಬುವವನನ್ನು ಪೋಲಿಸರು ಬಂಧಿಸಿದ್ದಾರೆ. ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರ ೦೯ ಕೆ.ಎಲ್.ಆರ್. ೦೮ : ದಂಪತಿಗಳಿಬ್ಬರ ಮೇಲೆ ಹರಿದ ಖಾಸಗಿ ಬಸ್ಸು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net