ದ.ಕ ಡಿಸಿಗೆ ಬೆದರಿಕೆ ಓರ್ವನ ಬಂಧನ

Published on

ಮಂಗಳೂರು
ದ.ಕ ಜಿಲ್ಲೆಯ ನಿರ್ಗಮಿತ ಜಿಲ್ಲಾಧಿಕಾರಿ ಸಿಂಧೂ.ಬಿ.ರೂಪೇಶ್ ಅವರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಬಿದಿರೆಯ ಓರ್ವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ ಮೂಡುಬಿದಿರೆ ಪೊಲೀಸರು ತೆಂಕಮಿಜಾರು ನಿವಾಸಿ ರಂಜಿತ್ ಎಂಬವನನ್ನು ಬಂಧಿಸಿದರು.
ಬಕ್ರೀದ್ ಹಿನ್ನೆಲೆಯಲ್ಲಿ ಮಾಧ್ಯಮ ಹೇಳಿಕೆ ನೀಡಿದ್ದ ಡಿಸಿ ಅಕ್ರಮ ಗೋಸಾಗಾಟದ ಬಗ್ಗೆ ಎಚ್ಚರಿಕೆ ನೀಡುವ ವೇಳೆ ಕಾನೂನು ಕೈಗೆತ್ತಿಕೊಳ್ಳದಂತೆಯೂ ಸೂಚಿಸಿದ್ದರು.
ಇದರ ಬಗ್ಗೆ ವಾಟ್ಸ್ಯಾಪ್ ಗ್ರೂಪ್‌ನಲ್ಲಿ ಆರೋಪಿ ರಂಜಿತ್ ''ಫಸ್ಟ್ ಮೊಲೆನ್ ಕರ್ತ್ ಕೆರೊಡು' ಎಂದು ತುಳುವಿನಲ್ಲಿ ಬೆದರಿಕೆ ಹಾಕಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net