ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ : ವಿಪಕ್ಷ ನಾಯಕ ಅಶೋಕ ಸೇರಿ ಶಾಸಕರು, ಮುಖಂಡರ ಬಂಧನ

Published on

ಕಲಬುರಗಿಯಲ್ಲಿ ಎತ್ತಿನ ಗಾಡಿಗಳ ಮೆರವಣಿಗೆ ನಡೆಸಿ ಬಿಜೆಪಿ ಪ್ರತಿಭಟನೆ

ಕಲಬುರಗಿ: ತೈಲದ ಮೇಲಿನ ತೆರಿಗೆ ಹೆಚ್ಚಳ ಖಂಡಿಸಿ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿ, ರಸ್ತೆ ತಡೆಗೆ ಮುಂದಾದ ಪ್ರತಿ ಪಕ್ಷ ನಾಯಕ ಆರ್.ಅಶೋಕ ಸೇರಿದಂತೆ ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಿದರು.

ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಎತ್ತನ ಬಂಡಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯತ್ತ ಸಾಗುವ ವೇಳೆ ಮಾರ್ಗ ಮಧ್ಯೆ ತಡೆದ ಪೊಲೀಸರು ಆರ್.ಅಶೋಕ ಸೇರಿದಂತೆ ಬಿಜೆಪಿ ಮುಖಂಡರು, ವಿಧಾನ ಪರಿಷತ್ ಸದಸ್ಯರನ್ನು ಬಂಧಿಸಿ, ಕರೆದುಕೊಂಡು ಹೋದರು.

ಈ ವೇಳೆ ಆರ್.ಅಶೋಕ ಮಾತನಾಡಿ, ಯಾವುದೇ ಬೆಲೆ ಏರಿಕೆ ಮಾಡಲ್ಲ ಎಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದು ಎಲ್ಲ ದರಗಳು ಏರಿಕೆ ಮಾಡಿದ್ದಾರೆ.

ಪೆಟ್ರೋಲ್ ಡಿಸೇಲ್,ಬಸ್ ದರ ಸೇರಿದಂತೆ ಎಲ್ಲ ಬೆಲೆ ಏರಿಕೆ. ಸಂಬಳ ಕೊಡಕ್ಕೂ ಇವರ ಹತ್ತಿರ ದುಡ್ಡು ಇಲ್ಲಾ. ಜನರಿಗೆ ತೆರಿಗೆ ಹಾಕಿ ಜನರಿಗೆ ಮೋಸ ಮಾಡ್ತಿದಾರೆ.

ಬಸ್ ದರ ನಾವು ಏರಿಕೆ ಮಾಡಿವೆ.ಹಾಲಿನ ದರ ಜಾಸ್ತಿ ಮಾಡಿಲ್ಲ. ಆದರೆ ಇವರು ಬಂದ ಮೇಲೆ ದರ ಏರಿಕೆ ಪರ್ವ ಆರಂಭವಾಗಿದೆ. ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗಿವೆ.

ಸಮರ್ಥ ಹಣಕಾಸು ಮಂತ್ರಿ ಆಗಿದ್ದರೆ, ಎಲ್ಲವೂ ಸಮರ್ಥವಾಗಿ ನಿಭಾಯಿಸುವ ಕೆಲಸ ಮಾಡಬೇಕಿತ್ತು.ಆದರೆ, ೮೦ ಸಾವಿರ ಕೋಟಿ ಹಣವನ್ನು ಪ್ರೀ ಗ್ಯಾರಂಟಿ ಸಲುವಾಗಿ ಇಟ್ಟುಕೊಂಡಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಅರವತ್ತು ದಾಟಿದೆ ಅರಳೋ ಮರಳೋ ಹಿಡಿದಿದೆ. ಅವರು ಆಡಿದೆ ಆಟ ಮಾಡಿದೆ ಕೆಲಸ. ಆಸ್ಪತ್ರೆಯಲ್ಲಿ ನೀರು ಕೊಡುಕ ಆಗ್ತಿಲ್ಲ. ಬೆಲೆ ಏರಿಕೆ ಬಿಸಿ ಜನರಿಗೆ ನೀಡಿದ್ದಾರೆ.

ಇಂತಹ ಮಾನಗೆಟ್ಟ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ದಾರಿಯಲ್ಲಿ ಹೋಗುವ ದಾಸಯ್ಯನಿಗೆ ಹಣಕಾಸು ಖಾತೆ ಕೊಟ್ಟರೆ ನಿಮಗಿಂತ ಚೆನ್ನಾಗಿ ನಿಭಾಯಿಸುವ ಕೆಲಸ ಮಾಡ್ತಾನೆ ಎಂದು ಸಿದ್ದರಾಮಯ್ಯ ಗೆ ತಿವಿದರು.

ಸಿದ್ದರಾಮಯ್ಯ ಬದುಕಿರೋದೆ ಕುಡಿಯುವ ಸಾರಾಯಿಗಳ ಮೇಲಿನ ಟ್ಯಾಕ್ಸ್ ಮೇಲೆ. ಎಲ್ಲದಕ್ಕೂ ತೆರಿಗೆ ಹಾಕಿ ಜನರ ಜೀವನ ಬಿದಿಗೆ ತಂದಿದ್ದಾರೆ. ರಾಜ್ಯದ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಮಾತು ಎತ್ತಿದರೆ ಬರೀ ಎರಡು ಸಾವಿರ ಬಗ್ಗೆ ಮಾತಾಡ್ತಾರೆ.

ಬ್ಯಾಡ್ ಹಣಕಾಸು ಸಚಿವ ಸಿದ್ದರಾಮಯ್ಯ. ಅವರ ಸಚಿವ ಸಂಪುಟದಲ್ಲಿ ಇರುವ ಸಚಿವರು ಸಹ ಉಪಯೋಗಕ್ಕೆ ಬಾರಜವರು ಎಂದ ಅವರು, ಜನರ ಜೀವನ ಜೊತೆ ಆಟವಾಡುವ ಕೆಲಸ ಸಿದ್ದರಾಮಯ್ಯ ಸರ್ಕಾರ ನಡೆಸಿದೆ.

ಜನಗಳ ಪರವಾಗಿ ನಾವು ಮುಂದೆ ಧ್ವನಿ ಎತ್ತುವ ಕೆಲಸ ಮಾಡುತ್ತೇವೆ‌ ಜನರು ನಮ್ಮ ಧ್ವನಿಗೆ ಧ್ವನಿಗೂಡಿಸಿ, ಸಾಥ್ ನೀಡಬೇಕು ಅಂದಾಗಲೇ ಈ ನಿಚ ಸರ್ಕಾರಕ್ಕೆ ಬುದ್ಧಿ ಬರುತ್ತದೆ.ಆಗ ಮಾತ್ರ ದರಗಳು ಕಡಿಮೆ ಮಾಡುತ್ತಾರೆ. ದರ ಇಳಿಸುವ ವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net