ತುಂಬಿ ತುಳುಕುತ್ತಿವೆ ಪ್ರವಾಸಿ ತಾಣಗಳು

1 (2)
Published on

ದೀಪಾವಳಿ ಸೇರಿದಂತೆ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನತ್ತ ಪ್ರವಾಸಿಗರು ಮುಖ ಮಾಡಿದ್ದು, ನಗರದ ಬಹುತೇಕ ಪ್ರವಾಸಿ ತಾಣಗಳು ತುಂಬಿ ತುಳುಕುತ್ತಿವೆ.

ನಗರದಲ್ಲಿ ಎಲ್ಲಿ ನೋಡಿದರೂ ಜನವೋ ಜನ. ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳಲ್ಲಿ ಕಿಕ್ಕಿರಿದು ಜನರು ತುಂಬಿರುವುದರಿಂದ ಮಳೆ-ಚಳಿಯಲ್ಲಿಯೂ ಹಿಗ್ಗಿನ ವಾತಾವರಣ ಮನೆ ಮಾಡಿದೆ.

ನಗರದ ಹೃದಯ ಸ್ಥಾನವಾದ ಅರಮನೆ ವೀಕ್ಷಣೆಗೆ ಹೆಚ್ಚು ಜನ ಸೇರುತ್ತಿದ್ದಾರೆ. ಮೃಗಾಲಯ, ಕಾರಂಜಿ ಕೆರೆ, ಚಾಮುಂಡಿ ಬೆಟ್ಟ, ದಸರಾ ವಸ್ತುಪ್ರದರ್ಶನ ಆವರಣ, ಸೇಂಟ್ ಫಿಲೋಮಿನಾ ಚರ್ಚ್‌ನಲ್ಲಿ ಕೂಡ ಅರಮನೆಯ ಸ್ಥಿತಿಯೇ ಇದೆ. ಎತ್ತ ನೋಡಿದರೂ ಜನ ಗುಂಪುಗುಂಪಾಗಿ ಸಂಚರಿಸುತ್ತಾ ಖುಷಿಪಡುತ್ತಿದ್ದಾರೆ. ಅಲ್ಲದೆ ನಗರ ಮಾಲ್‌ಗಳು ಜನರಿಂದ ಗಿಜಿಗುಡುತ್ತಿವೆ.

ಸಾಲು-ಸಾಲು ರಜೆ ಕಾರಣ ಉದ್ಯೋಗಿಗಳು ಪ್ರವಾಸಕ್ಕೆ ಬರುವುದು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ಇದೇ ಸಮಯದಲ್ಲಿ ಶೈಕ್ಷಣಿಕ ಪ್ರವಾಸ ಆಯೋಜಿಸುವುದರಿಂದ ಈ ಸಮಯದಲ್ಲಿ ಮೈಸೂರಿನಲ್ಲಿ ಅಕ್ಷರಶಃ ಜನಜಾತ್ರೆಯೇ ಕಂಡು ಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net