

ಕೆ.ಆರ್.ನಗರ: ತಾಲೂಕಿನ ತಿಪ್ಪೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಮಧು, ಉಪಾಧ್ಯಕ್ಷೆಯಾಗಿ ಜೆಡಿಎಸ್ ಬೆಂಬಲಿತ ಡಿ.ಕೆ.ಅನಿತಾ ಮಂಜು ಚುನಾಯಿತರಾದರು.
18 ಸದಸ್ಯರ ಬಲವಿರುವ ಪಂಚಾಯಿತಿಯಲ್ಲಿ ಗುರುವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಧು ಮತ್ತು ಭಾಸ್ಕರ್‌ನಾಯಕ್ ಹಾಗೂ ಹಿಂದುಳಿದ ವರ್ಗ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಅನಿತಾ ಮತ್ತು ಅನಸೂಯಾ ಗಿರಿರಾಜ್ ನಾಮಪತ್ರ ಸಲ್ಲಿಸಿದರು. ಚುನಾವಣೆಯಲ್ಲಿ ಮಧು 10 ಮತ ಪಡೆದರೆ, ಭಾಸ್ಕರ್‌ನಾಯಕ 7 ಮತ ಪಡೆದರು. 1 ಮತ ಅಸಿಂಧು ಆಯಿತು. ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ತಲಾ 9 ಮತ ಪಡೆದಾಗ ಲಾಟರಿ ಎತ್ತಲಾಯಿತು. ಈ ವೇಳೆ ಅನಿತಾ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಎಸ್.ಎಂ.ಅಶೋಕ್‌ಕುಮಾರ್ ಕರ್ತವ್ಯ ನಿರ್ವಹಿಸಿದರು. ಸದಸ್ಯರಾದ ನೀಲಯ್ಯ, ಎ.ಪಿ.ದಾಕ್ಷಾಯಿಣಿ, ಶಿವಣ್ಣ, ಎಚ್.ಆರ್.ಭವ್ಯಾ, ಪಿ.ರಾಮಕೃಷ್ಣೇಗೌಡ, ಶೋಭಾ, ಟಿ.ಎನ್.ಸತ್ಯನಾರಾಯಣ, ಭಾರತಿ, ಕೆ.ಸಿ.ರಮ್ಯಾ, ರತ್ನಮ್ಮ, ಡಿ.ಜೆ.ಮಹದೇವ, ಶೈಲಜಾ, ರಾಜೇಗೌಡ, ಪಿಡಿಒ ಜಿ.ಎಲ್.ಧನಂಜಯ, ಗ್ರಾಪಂ ಮಾಜಿ ಸದಸ್ಯ ಮಂಜು, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ದೆಗ್ಗನಹಳ್ಳಿ ಆನಂದ್, ಮುಖಂಡರಾದ ತಿಪ್ಪೂರು ಮಹದೇವನಾಯಕ, ಪೇಮ್, ವಿಷ್ಣು, ವಿಶ್ವ, ದಿಲೀಪ್ ಹಾಜರಿದ್ದರು.