ತಾಲೂಕು ಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟ ನಾಳೆ

mysore sports
Published on


ಸರಗೂರು: ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ತಾಲೂಕು ಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟವನ್ನು ಸೆ.4 ರಂದು ಆಯೋಜಿಸಲಾಗಿದೆ.


ಆಸಕ್ತ ಕ್ರೀಡಾಪಟುಗಳು ಅಂದು ಬೆಳಗ್ಗೆ 8 ಗಂಟೆಗೆ ಹೆಸರನ್ನು ನೊಂದಾಯಿಸಿಕೊಳ್ಳಬೇಕೆಂದು ಕ್ರೀಡೆ ಇಲಾಖೆ ತಿಳಿಸಿದೆ.


ಸ್ಪರ್ಧೆಗಳ ವಿವರ: ಪುರುಷರು ವಿಭಾಗ- ಅಥ್ಲೆಟಿಕ್-100, 200, 400, 800, 1500, 5000 ಮೀಟರ್ ಓಟ. ಉದ್ದ ಜಿಗಿತ, ಎತ್ತರ ಜಿಗಿತ, ಗುಂಡುಎಸೆತ, ಟ್ರಿಪಲ್ ಜಂಪ್, ಜಾವಲಿನ್ ಎಸೆತ, ಡಿಸ್ಕಸ್ ಎಸೆತ, 100 ಮೀ. ಹರ್ಡಲ್ಸ್ ಮತ್ತು 4400ಮೀ. ರಿಲೇ 110 ಮೀ. ಹರ್ಡಲ್ಸ್. ಮಹಿಳೆಯರ ವಿಭಾಗ: ಅಥ್ಲೆಟಿಕ್-100, 200, 400, 800, 1500, 5000, ಮೀಟರ್ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಎಸೆತ, ಡಿಸ್ಕಸ್ ಎಸೆತ, 100 ಮೀ. ಹರ್ಡಲ್ಸ್ ಮತ್ತು 4400 ಮೀ. ರಿಲೇ 110 ಮೀ. ಹರ್ಡಲ್ಸ್, ವಾಲಿಬಾಲ್, ಕಬ್ಬಡಿ ಖೋ ಖೋ ಥ್ರೋಬಾಲ್, ಫುಟ್ಬಾಲ್.


ಭಾಗವಹಿಸುವ ಕ್ರೀಡಾಪಟುಗಳು ಶ್ರೀವಿಶ್ವ ಜಿಮ್ ಇನ್‌ಸ್ಟ್ರಕ್ಟರ್ ಮೊ: 94810 75364, ದೈಹಿಕ ಶಿಕ್ಷಣ ಶಿಕ್ಷಕ ಮೊ ನಂ. 99868 90539 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net