ತಾಲೂಕಿನ ಅಭಿವೃದ್ಧಿಗೆ ಹೆಚ್ಚು ಶ್ರಮ

IMG20230415112124
Published on

  • ಬೈಲಕುಪ್ಪೆ: ಚುನಾವಣೆಯಲ್ಲಿ ನನ್ನ ಗೆಲುವಿಗೆ ಮತದಾರರು ಕಾರಣಕರ್ತರಾಗಬೇಕು ಎಂದು ಪಿರಿಯಾಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಮನವಿ ಮಾಡಿದರು.
    ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಪ್ಪ ಸರ್ಕಲ್ನಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಇಲ್ಲಿ ತನಕ ಕಾಂಗ್ರೆಸ್, ಜೆಡಿಎಸ್ ಪಕ್ಷವನ್ನು ನೀವು ನೋಡಿದ್ದೀರಿ. ಈ ಬಾರಿ ನಿಮ್ಮ ಮನೆ ಮಗನೆಂದು ತಿಳಿದು ನನಗೆ ಮತ ನೀಡಿ ಆಶೀರ್ವಾದ ಮಾಡಿದ್ದೇ ಆದಲ್ಲಿ ತಾಲೂಕಿನ ಅಭಿವೃದ್ಧಿಗೆ ಹೆಚ್ಚು ಶ್ರಮಿಸುತ್ತೇನೆ ಎಂದರು. ಇದಕ್ಕೂ ಮೊದಲು ಕೊಪ್ಪ ಗಡಿಭಾಗದಲ್ಲಿರುವ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು.
    ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಎಂ. ರಾಜೇಗೌಡ, ಮುಖಂಡರಾದ ಸುನಿಲ್ ಸುಬ್ರಹ್ಮಣ್ಯ. ಮಾಜಿ ಶಾಸಕ ಎಚ್.ಸಿ. ಬಸವರಾಜ್. ಆರ್.ಟಿ. ಸತೀಶ್. ವಿಕ್ರಂರಾಜ್, ಅಣ್ಣಪ್ಪ, ಬೆಮ್ಮತಿ ಚಂದ್ರು, ಕೌಲನಹಳ್ಳಿ ಸೋಮಶೇಖರ್, ಕೆ.ಕೆ. ನಾರಾಯಣ, ಎಂ. ರವಿ, ನಳಿನಿ, ಪ್ರವೀಣ್. ಮಹದೇವ್, ನಟರಾಜ್, ಜವರಪ್ಪ, ರಾಜಪ್ಪ, ವಸಂತ ಸೇರಿದಂತೆ ಮತ್ತಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net