

ಬಾಳೆಹೊನ್ನೂರು: ಗೌರಿ ಹಬ್ಬವು ಮಹಿಳೆಯರಿಗೆ ವಿಶೇಷವಾದ ಹಬ್ಬ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ಜೆ.ವಿಕ್ರಮ್ ಹೇಳಿದರು. ಲಯನ್ಸ್ ಕ್ಲಬ್‌ಯಿಂದ ಗೌರಿ ಹಬ್ಬದ ಅಂಗವಾಗಿ ಕ್ಲಬ್‌ನ ಮಹಿಳಾ ಸದಸ್ಯರಿಗೆ ಸೋಮವಾರ ಬಾಗಿನ ನೀಡಿ ಮಾತನಾಡಿ, ಗೌರಿಹಬ್ಬ ಮದುವೆಯಾದ ಹೆಣ್ಣು ಮಕ್ಕಳಿಗೆ ಶ್ರೇಷ್ಠವಾಗಿದ್ದು , ತವರಿನಿಂದ ನೀಡುವ ಅರಿಶಿನ, ಕುಂಕುಮ, ಬಳೆ, ಹೂವು, ಸೀರೆ ಮುಂತಾದ ಬಾಗಿನದ ಸಾಮಗ್ರಿಗಳು ಆಕೆಗೆ ಹರುಷ ತರುತ್ತದೆ. ಇಂತಹ ಬಾಂಧವ್ಯದ ಬೆಸುಗೆಯ ಹಬ್ಬವನ್ನು ಲಯನ್ಸ್ ಸಂಸ್ಥೆಯು ಈ ಬಾರಿ ವಿಶೇಷವಾಗಿ ಆಚರಿಸುತ್ತಿದೆ ಎಂದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಸುಧಾಕರ್, ಖಜಾಂಚಿ ಕೆ.ಸಿ.ರವೀಂದ್ರ, ನಿಕಟಪೂರ್ವ ಅಧ್ಯಕ್ಷ ಎಂ.ವಿ.ಶ್ರೀನಿವಾಸಗೌಡ, ವಲಯಾಧ್ಯಕ್ಷ ಎಂ.ಡಿ.ಶಿವರಾಮ್, ಪೂರ್ವಾಧ್ಯಕ್ಷ ಎಂ.ಎಸ್.ಪ್ರವೀಣ್‌ಕುಮಾರ್, ಸದಸ್ಯರಾದ ಎಚ್.ಉಮೇಶ್, ಯೋಗೀಶ್, ಉಪೇಂದ್ರ, ಜ್ಯೋತಿ ಉಮೇಶ್, ಗೀಷ್ಮ, ಜ್ಯೋತಿ ಜಗದೀಶ್ ಮತ್ತಿತರರಿದ್ದರು.