ತಪ್ಪಿತಸ್ಥರಿಗೆ ಬಹಿರಂಗ ನೇಣು ಶಿಕ್ಷೆ ವಿಧಿಸಲು ಒತ್ತಾಯ

CTD 3 KAVADIGAR HATTI -STRIKE- 3
Published on


ಚಿತ್ರದುರ್ಗ: ಕಲುಷಿತ ನೀರು ಸೇವಿಸಿ ಮೂವರು ಮೃತಪಟ್ಟಿರುವ ಹಾಗೂ ನೂರಾರು ಜನರು ಅಸ್ವಸ್ಥಗೊಂಡಿರುವ ಘಟನೆಯನ್ನು ಖಂಡಿಸಿ ಗುರು ವಾರ ಕವಾಡಿಗರಹಟ್ಟಿಯ ದಲಿತ ಕಾಲನಿ ನಿವಾಸಿಗಳು ರಾ.ಹೆ.13ರಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಹಿರಿಯೂರು ತಾಲೂಕು ಐಮಂಗಲ ಶ್ರೀ ಮಹಾಶಿವಶರಣ ಹರಳಯ್ಯ ಗುರುಪೀಠದ ಶ್ರೀ ಬಸವ ಹರಳಯ್ಯ ಸ್ವಾಮೀಜಿ ಅವರು,ನೀರಿನಲ್ಲಿ ವಿಷ ಬೇರೆಸಿರುವ ಶಂಕೆ ಇದ್ದು,ತಪ್ಪಿತಸ್ಥರಿಗೆ ಬಹಿರಂಗವಾಗಿ ನೇಣು ಶಿಕ್ಷೆ ವಿಧಿಸ ಬೇಕು. ಮೃತರ ನೊಂದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಸ್ಥಳೀಯ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ಘಟನೆ ನಡೆದು 3 ದಿನಗಳಾಗಿದ್ದರೂ ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ. ಮಾದಿಗ ಸಮುದಾಯ ದ ಶಾಸಕರು,ಮಂತ್ರಿಗಳು ಹಾಗೂ ಕೇಂದ್ರ ಸಚಿವರು ಬಂದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ವಕೀಲ ಎಸ್.ರವೀಂದ್ರ ಮಾತನಾಡಿ,ಸಿಎಂ ಸಿದ್ದರಾಮಯ್ಯ ಅವರು ಸ್ಥಳಕ್ಕೆ ಭೇಟಿ ಕೊಡ ಬೇಕೆಂದು ಒತ್ತಾಯಿಸಿದರು. ಸ್ಥಳಕ್ಕೆ ಬಾರದ ಹಲವು ಜನಪ್ರತಿನಿಧಿಗಳ ವಿರುದ್ಧವೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳೀಯ ನಗರಸಭೆ ಸದಸ್ಯ ಜಯಣ್ಣ ವಿರುದ್ಧ ಜ ನರ ಆಕ್ರೋಶ ಹೊರ ಹೊಮ್ಮಿತು. ಪರ್ಯಾಯ ನೀರಿನ ವ್ಯವಸ್ಥೆ ಅಸಮರ್ಪಕವಾಗಿದೆ ಎಂದು ದೂರಿದರು. ತಪ್ಪಿತಸ್ಥ ಅಧಿಕಾರಿಗಳು,ನೌಕರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸರ್ಕಾರ,ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಗಡ್ಡದ ಮಂಜಣ್ಣ,ಬಿ.ಕುಮಾರಸ್ವಾಮಿ,ಸತೀಶ್,ಮಂಜಣ್ಣ,ಕೋಟಿ,ಜಗದೀಶ್,ನಾಗರಾಜ್,ಅಭಿಷೇಕ್,ಮಲ್ಲಿಕಾರ್ಜುನ್,ಆರ್.ರವಿ, ಎನ್.ನಿಂಗಪ್ಪ,ಚಂದ್ರಶೇಖರ್,ಕುಮಾರ್,ಪ್ರಸಾದ್ ಮತ್ತಿತರರು,ನವ ಪ್ರಜಾ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಏಕಾಂತಪ್ಪ,ಕರುನಾಡು ವಿಜಯ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್,ದಲಿತ ಸಂಘರ್ಷ ಸಮಿತಿ ಮುಖಂಡರು,ಸ್ಥಳೀಯ ನೂರಾರು ಜನರು ಪ್ರತಿಭಟನೆಯಲ್ಲಿದ್ದರು.
ರಸ್ತೆ ತಡೆ ಹಿನ್ನೆಲೆಯಲ್ಲಿ ಪೊಲೀಸರು ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಎಸಿ ಎಂ.ಕಾರ್ತಿ ಕ್,ಎಎಸ್‌ಪಿ ಕುಮಾರಸ್ವಾಮಿ,ಗ್ರಾಮಾಂತರ ಠಾಣೆ ಪಿಐ ಬಾಲಚಂದ್ರನಾಯಕ್,ತಹಸೀಲ್ದಾರ್ ಡಾ.ನಾಗವೇಣಿ,ನಗರಸಭೆ ಆಯುಕ್ತ ಶ್ರೀ ನಿವಾಸ್ ಮತ್ತಿತರ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net