

ರಾಯಚೂರು ;
ಗರ್ಭಿಣಿ ಪತ್ನಿಯ ಆರೋಗ್ಯ ತಪಾಸಣೆಗಾಗಿ ಬೈಕ್ ನಲ್ಲಿ ತೆರಳುತ್ತಿದ್ದ ಮೂವರಿಎ ಲಾರಿ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಮೂವರ ದುರ್ಮರಣ.
ಜಿಲ್ಲೆಯ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದ ಹತ್ತಿರ
ಮಾಟೂರು ಗ್ರಾಮದ ಪರಸಪ್ಪ( 35), ಪತ್ನಿ ಕನಕಮ್ಮ(28), ಪುತ್ರಿ ನಾಗಮ್ಮ(2) ಮೃತ ಪಟ್ಟಿದ್ದಾರೆ.
ಪರಸಪ್ಪನ ಪತ್ನಿ ಕನಕಮ್ಮಳು ಗರ್ಭಿಣಿ ಯಾಗಿದ್ದು, ತವರು ಮನೆ ಚಿಕ್ಕಬೇರ್ಗಿ ಗ್ರಾಮಕ್ಕೆ ಬಂದಿದ್ದಳು. .
ಈಕೆಯ ಆರೋಗ್ಯ ತಪಾಸಣೆಗೆ ಇಲಕಲ್ ಗೆ ಹೋಗುವಾಗ ಲಾರಿ ಡಿಕ್ಕಿ ಹೊಡೆದಿದ್ದು, ಲಾರಿ ಚಾಲಕ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗರ್ಭಿಣಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತ ಪಟ್ಟಿದ್ದಾಳೆ
ಈ ಕುರಿತು ತುರ್ವಿಹಾಳ ಪೊಲೀಸ ಠಾಣೆ ಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.