

ಸೋಮವಾರ ಹೈಕೋರ್ಟ್‌ನಲ್ಲಿ ಮುಡಾ ಪ್ರಕರಣದ ಅರ್ಜಿ ವಿಚಾರಣೆ ಸಂಬಂಧ ಪ್ರತಿಕ್ರಿಸಿದ ಆರ್.ಅಶೋಕ್ ಅವರು, ಮುಡಾ ಹಗರಣ ಬಹುದೊಡ್ಡ ಪ್ರಕರಣವಾಗಿದೆ. ನಾವು ಹೋರಾಟ ಮಾಡಿದ್ದು ಸಿಬಿಐಗೆ ಪ್ರಕರಣವನ್ನು ವಹಿಸಿ ಅಂತ. ಲೋಕಾಯುಕ್ತ ತನಿಖೆ ಪಾರದರ್ಶಕತೆಯಿಂದ ಆಗಿಲ್ಲ. ಸಿದ್ದರಾಮಯ್ಯ ಪರವಾಗಿ ಲೋಕಾಯುಕ್ತ ಅಧಿಕಾರಿಗಳು ರಿಪೋರ್ಟ್ ಕೊಡುತ್ತಾರೆ.
ಅಧಿಕಾರಿಗಳಿಗೆ ಪ್ರಮೋಶನ್ ಬೇಕು. ವಿಚಾರಣೆಗೆ ಮುಖ್ಯಮಂತ್ರಿಗಳ ಸಮಯ ಫಿಕ್ಸ್ ಮಾಡಿಕೊಂಡು ಬರುತ್ತಾರೆ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು.
ಎಲ್ಲಿಂದಲೋ ಬಂದ ಇಡಿ ಇಲ್ಲಿನ ಆಸ್ತಿ ಮುಟ್ಟುಗೋಲು ಹಾಕುತ್ತದೆ. ಇಲ್ಲೇ ಇರುವಂತಹ ಲೋಕಾಯುಕ್ತ ಏಕೆ ಸುಮ್ಮನೆ ಕುಳಿತಿದೆ. ಇಲ್ಲಿ ಕೇವಲ 14 ಸೈಟುಗಳು ಮಾತ್ರವಲ್ಲ, 1500ಕ್ಕೂ ಹೆಚ್ಚು ಸೈಟುಗಳ ಹಗರಣ ನಡೆದಿದೆ. ನಮ್ಮ ಮುಡಾ ಹೋರಾಟ ಮುಂದುವರೆಯುತ್ತದೆ ಎಂದರು.