ತತ್ವ ಪ್ರಪಂಚಕ್ಕೆ ವಾದಿರಾಜರ ಕೊಡುಗೆ ಅನನ್ಯ

Vadiraja's contribution to the world of philosophy is unique.
ವಿಜಯಪುರದ ಶ್ರೀಕೃಷ್ಣ ವಾದಿರಾಜ ಮಠದಲ್ಲಿ ಬುಧವಾರ ನಡೆದ ಪ್ರವಚನ ಉದ್ಘಾಟನಾ ಸಮಾರಂಭದಲ್ಲಿ ಮಧ್ವಮಹಾಮಂಡಳದ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಮಾತನಾಡಿದರು. ಸಮಿತಿ ಅಧ್ಯಕ್ಷ ಡಾ.ಕಿರಣ ಚುಳಕಿ, ಪಂ.ವಾಸುದೇವಾಚಾರ್ಯ ಅಗ್ನಿಹೋತ್ರಿ ಇದ್ದರು.
Published on

ವಿಜಯಪುರ: ಇಲ್ಲಿನ ಶ್ರೀ ಕೃಷ್ಣ ವಾದಿರಾಜ ಮಠದಲ್ಲಿ ಶ್ರೀ ವಾದಿರಾಜ ತೀರ್ಥರ ಆರಾಧನಾ ಮಹೋತ್ಸವ ನಿಮಿತ್ತ 12 ರಿಂದ 17ರ ವರೆಗೆ ನಿತ್ಯ ಸಂಜೆ 6.30 ರಿಂದ 7.30ರ ವರೆಗೆ ಪಂ. ಮಧುಸೂದನಾಚಾರ್ಯ ಕಟ್ಟಿ ಅವರಿಂದ ಪ್ರವಚನ ನಡೆಯಲಿದೆ.

12 ರಂದು ಸಂಜೆ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಖಿಲ ಭಾರತ ಮಧ್ವಮಹಾಮಂಡಳ ವಿಜಯಪುರ ಶಾಖೆಯ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ತತ್ವ ಪ್ರಪಂಚಕ್ಕೆ ಶ್ರೀ ವಾದಿರಾಜರು ಮಹತ್ತರ ಕೊಡುಗೆ ನೀಡಿದ್ದಾರೆ. ಲಕ್ಷಿ$್ಮ ಶೋಭಾನ ಹಾಡು ಸೇರಿ ಅನೇಕ ಕೃತಿಗಳನ್ನು ರಚಿಸುವ ಮೂಲಕ ಮಧ್ವ ಸಿದ್ಧಾಂತಕ್ಕೆ ಅನುಪಮ ಸೇವೆಗೈದಿದ್ದಾರೆ ಎಂದರು.

17ರಂದು ಆರಾಧನೆ ನಿಮಿತ್ತ ಬೆಳಗ್ಗೆ ವಾದಿರಾಜತೀರ್ಥರ ಭಾವಚಿತ್ರಕ್ಕೆ ಪೂಜೆ, ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ ಸೇರಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ಮಹಿಳಾ ಭಜನಾ ಮಂಡಳಿಗಳಿಂದ ಹರಿ ಭಜನೆ, ಪ್ರವಚನ ನಡೆಯಲಿದೆ. ಧಾರ್ಮಿಕ ಆಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಹನಿಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಹೇಳಿದರು.

ಸಮಿತಿ ಅಧ್ಯಕ್ಷ ಡಾ. ಕಿರಣ ಚುಳಕಿ, ಗೌರವಾಧ್ಯಕ್ಷ ಗೋಪಾಲ ನಾಯಕ, ವ್ಯವಸ್ಥಾಪಕ ಪಂ. ವಾಸುದೇವಾಚಾರ್ಯ ಅಗ್ನಿಹೋತ್ರಿ, ಅರ್ಚಕ ಸಮೀರಾಚಾರ್ಯ, ವಿಕಾಸ ಪದಕಿ, ಡಾ.ಆರ್​.ಜಿ. ಮಂಗಲಗಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net