ತಡೆಗೋಡೆಗೆ ಕಾರು ಡಿಕ್ಕಿಯಾಗಿ ಮೂವರಿಗೆ ಗಾಯ

Published on

ಹನೂರು: ತಾಲೂಕಿನ ಆರ್.ಎಸ್.ದೊಡ್ಡಿ ಸಮೀ ಪದ ಅಗ್ನಿಶಾಮಕ ಠಾಣೆ ಬಳಿ ಗುರುವಾರ ಚಾಲಕನ ನಿಯಂತ್ರಣ ತಪ್ಪಿದ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ.


ಅಜ್ಜೀಪುರ ಗ್ರಾಮದ ಚಾಲಕ ಮಲ್ಲಿಕಾರ್ಜುನ್(50), ಭಾಗ್ಯಮ್ಮ (75), ಹೇಮಚಂದ್ರ (16) ಹಾಗೂ ಮೋಹಿತ್ ಗಾಯಗೊಂಡವರು.


ಇವರೆಲ್ಲ ಒಂದೇ ಕುಟುಂಬದವರಾಗಿದ್ದು, ಮಧ್ಯಾಹ್ನ 1.30ರಲ್ಲಿ ಓಮ್ನಿ ಕಾರಿನಲ್ಲಿ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಈ ಅವಘಡ ಸಂಭವಿಸಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಕಾಮಗೆರೆ ಖಾಸಗಿ ಆಸ್ಪತೆಗೆ ದಾಖಲು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net