ತಟ್ಟೆಕೆರೆ, ಕಡೆಮನುಗನಹಳ್ಳಿ ಗ್ರಾಪಂಗೆ ಆಯ್ಕೆ

Published on

ಹನಗೋಡು: ಹನಗೋಡು ಹೋಬಳಿಯ ತಟ್ಟೆಕೆರೆ ಹಾಗೂ ಕಡೆಮನುಗನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ತಲಾ ಒಂದು ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಿತು.


ತಟ್ಟೆಕೆರೆ ಗ್ರಾಪಂ: ತಟ್ಟೆಕೆರೆ ಗ್ರಾಮ ಪಂಚಾಯಿತಿಯ ನಿಲುವಾಗಿಲು ಸಾಮಾನ್ಯ ಕ್ಷೇತ್ರಕ್ಕೆ ಜು.23ರಂದು ನಿಗದಿಯಾಗಿತ್ತು. ಕ್ಷೇತ್ರದಿಂದ ಸ್ಪರ್ಧಿಸಿದ್ದ ತಿಮ್ಮೇಗೌಡ 378 ಮತಗಳಿಸಿ ಆಯ್ಕೆಯಾದರೆ ಪ್ರತಿಸ್ಪರ್ಧಿ ರಮ್ಯಾ 258 ಮತಗಳಿಸಿ ಪರಾಭವಗೊಂಡರು. ಮತ ಎಣಿಕೆ ಕಾರ್ಯ ಬುಧವಾರ ತಾಲೂಕು ಕಚೇರಿಯಲ್ಲಿ ನಡೆಯಿತು. ಚುನಾವಣಾಧಿಕಾರಿಯಾಗಿದ್ದ ಬಿ.ಆರ್.ಸಿ.ಸಂತೋಷಕುಮಾರ್, ಸಹಾಯಕ ಚುನಾವಣಾಧಿಕಾರಿ ತ್ರಿನೇಶ್ ತಿಮ್ಮೇಗೌಡಗೆ ಪ್ರಮಾಣ ಪತ್ರ ವಿತರಿಸಿದರು.


ಅವಿರೋಧ ಆಯ್ಕೆ: ಕಡೇಮನುಗನಹಳ್ಳಿ ಪಂಚಾಯಿತಿಯ ಹೆಬ್ಬಾಳ ಕ್ಷೇತ್ರದಿಂದ ಜಿ.ಕೆ.ನಾಗರಾಜ್ (ನಾಗಣ್ಣ) ಅವಿರೋಧ ಆಯ್ಕೆಯಾದರು. ಚುನಾವಣಾಧಿಕಾರಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜು ಪ್ರಮಾಣ ಪತ್ರ ವಿತರಿಸಿದರು ಎಂದು ಚುನಾವಣಾ ಶಿರಸ್ತೇದಾರ್ ಕಿರಣ್ ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net