ತಂಬಾಕು ಉತ್ಪನ್ನ ಸೇವನೆ ಸಾವಿಗೆ ರಹದಾರಿ

16 nrp 2 tobbaco
ಎನ್.ಆರ್.ಪುರ ತಾಲೂಕು ಗುಬ್ಬಿಗಾ ಅಂಗಡಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ, ನಿಷೇಧದ ಮಾಹಿತಿ ನೀಡಲಾಯಿತು. ದರ್ಶನಾಥ, ಶ್ರೀನಾಥ, ಗಣೇಶ್ ಓಲೇಕಾರ್, ಹೂವಮ್ಮ, ರಜಿನಿ, ಶಿಲ್ಪಾ, ಜಗದೀಶ್ ಇದ್ದರು.
Published on

ಎನ್.ಆರ್.ಪುರ: ತಂಬಾಕು ಉತ್ಪನ್ನಗಳ ಸೇವನೆಯಿಂದ ಮಾರಕ ರೋಗ ಕ್ಯಾನ್ಸರ್ ಬರಲಿದೆ ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಲ್.ಎಂ.ದರ್ಶನಾಥ ತಿಳಿಸಿದರು.

ಶನಿವಾರ ಗುಬ್ಬಿಗಾ ಗ್ರಾಪಂ ಗುಬ್ಬಿಗಾ, ಈಚಿಕೆರೆ, ಸುತ್ತ, ವಗಡೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಗ್ರಾಪಂ ಆಶ್ರಯದಲ್ಲಿ ವಿವಿಧ ಅಂಗಡಿಗಳ ಮೇಲೆ ದಾಳಿ ಮಾಡಿ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡ ನಂತರ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿ, ತಂಬಾಕು ಉತ್ಪನ್ನ ಸೇವನೆ ಮಾಡುವ ಅಭ್ಯಾಸವನ್ನು ತ್ಯಜಿಸಿ ಆರೋಗ್ಯವಂತ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಎಎಸ್‌ಐ ಶ್ರೀಧರ್ ಮಾತನಾಡಿ, ಪ್ರತಿ ಅಂಗಡಿಯ ಮುಂದೆ ಧೂಮಪಾನ ನಿಷೇಧಿಸಿದೆ ಹಾಗೂ 18 ವಷರ್ದ ಒಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದಿಲ್ಲ ಎಂಬ ಸೂಚನಾ ಲಕ ಕಡ್ಡಾಯವಾಗಿ ಹಾಕಬೇಕು ಎಂದು ಸೂಚಿಸಿದರು.

ಬಹಿರಂಗವಾಗಿ ತಂಬಾಕು ಉತ್ಪನ್ನಗಳನ್ನು ಪ್ರದರ್ಶಿಸುವುದು, ಸೇವಿಸಲು ಉತ್ತೇಜನ ನೀಡುವುದು, ಶಾಲೆಯ 100 ಮೀಟರ್ ಅಂತರದಲ್ಲಿ ಮಾರಾಟ ಮಾಡುವುದು ಅಪರಾಧ ಎಂದರು.

ಮುರಾರ್ಜಿ ದೇಸಾಯಿ ವಸತಿ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಓಲೆಕಾರ್ ಮಾತನಾಡಿ, ತಂಬಾಕು ಉತ್ಪನ್ನಗಳಿಂದ ಆಗುವ ದುಷ್ಪರಿಣಾಮದ ಬಗ್ಗೆ ಅಂಗಡಿಗಳ ಮಾಲೀಕರು ಅರಿತುಕೊಂಡಿರಬೇಕು ಎಂದು ಹೇಳಿದರು.

ಅಂಗಡಿ, ಹೋಟೆಲ್ ಸೇರಿದಂತೆ 6 ಪ್ರಕರಣ ದಾಖಲಿಸಿಕೊಂಡು 2,100 ರೂ. ದಂಡ ವಸೂಲಿ ಮಾಡಲಾಯಿತು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಆರ್.ಕೇಶವಮೂರ್ತಿ, ಗ್ರಾಪಂ ಕಾರ್ಯದರ್ಶಿ ಹೂವಮ್ಮ, ಬಿಲ್‌ಕಲೆಕ್ಟರ್ ಜಗದೀಶ್, ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಶಿಲ್ಪಾ, ಆಶಾ ಕಾರ್ಯಕರ್ತೆ ರಜನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net