ತಂಬಾಕು ಉತ್ಪನ್ನ ಮಾರಾಟ ಮಳಿಗೆಗಳ ಮೇಲೆ ದಾಳಿ

HUN-JUNE-20-5(COPTA DALI)
Published on

ಹುಣಸೂರು: ತಾಲೂಕಿನ ಹನಗೋಡು ಗ್ರಾಮದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಳಿಗೆಗಳ ಮೇಲೆ ಮಂಗಳವಾರ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ತಂಬಾಕು ಮಾರಾಟ ನಿಷೇಧ ಕಾಯ್ದೆ(ಕೋಟ್ಪಾ)ಯಡಿ 48 ಪ್ರಕರಣ ದಾಖಲಿಸಿ 5 ಸಾವಿರ ರೂ. ದಂಡ ವಸೂಲಿ ಮಾಡಿತು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾವತಿ ಮಾತನಾಡಿ, ಶಾಲಾ, ಕಾಲೇಜುಗಳಿಂದ 100 ಮೀಟರ್ ಅಂತರದಲ್ಲಿ ಗುಟ್ಖಾ, ಸಿಗರೇಟ್ ಮಾರಾಟ ನಿಷೇಧಿಸಲಾಗಿದೆ. ಚಿಲ್ಲರೆ ಮಾರಾಟವನ್ನೂ ನಿಷೇಧಿಸಲಾಗಿದೆ. ತಂಬಾಕು ನಿಷೇಧದ ಕುರಿತ ಫ್ಲೆಕ್ಸ್ ಅಳವಡಿಸಲು ಪ್ರತಿ ಅಂಗಡಿ ಮಾಲೀಕರಿಗೂ ಸೂಚಿಸಲಾಗಿದೆ. ಇಲಾಖೆ ಸಹಯೋಗದಲ್ಲಿ ತಂಡವು ದಿಢೀರ್ ದಾಳಿ ನಡೆಸಿ ತಪ್ಪಿತಸ್ಥರ ವಿರುದ್ಧ ದಂಡ ವಸೂಲಿ ಮಾಡುತ್ತಿದ್ದು, ಪದೇ ಪದೆ ದಂಡ ಶುಲ್ಕ ಪ್ರಕರಣ ದಾಖಲಾಗುತ್ತಿದ್ದರೆ ಅಂತಹ ಅಂಗಡಿ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವಿಶ್ವನಾಥ್, ಪ್ರಭಾಕರ್, ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಹಮದ್ ಅಜರ್, ಚಂದ್ರಶೇಖರ್, ಎಎಸ್‌ಐ ಸುರೇಶ್ ಹಾಗೂ ಸಿಬ್ಬಂದಿ ಹಾಜರಿದ್ದರು .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net