ತಂಬಾಕಿನ ಜತೆ ಅನ್ಯ ಬೆಳೆ ಬೆಳೆಯಿರಿ

IMG20230623125600
Published on

ಕಟ್ಟೆಮಳಲವಾಡಿ: ತಂಬಾಕಿನ ಜತೆಗೆ ಅನ್ಯ ಬೆಳೆಗಳನ್ನೂ ಬೆಳೆಯುವುದರಿಂದ ಆದಾಯ ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶ್ ತಿಳಿಸಿದರು.

ಕಟ್ಟೆಮಳಲವಾಡಿ ಗ್ರಾಮದ ತಂಬಾಕು ಹರಾಜು ಮಾರುಕಟ್ಟೆಯ ರೈತರ ಭವನದಲ್ಲಿ ಶುಕ್ರವಾರ ತಂಬಾಕು ಬೆಳೆಗಾರರು ಮತ್ತು ಸಿಬ್ಬಂದಿಗೆ ಪರ್ಯಾಯ ಬೆಳೆ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ನಮ್ಮ ಹುಣಸೂರು ತಾಲೂಕಿನಲ್ಲಿ ಹತ್ತಿ, ಅಲಸಂದೆ, ಶುಂಠಿ, ಮುಸುಕಿನ ಜೋಳ, ಅವರೆ ಹಾಗೂ ಮೆಣಸಿನಕಾಯಿ ಮುಂತಾದ ಬೆಳೆಗಳನ್ನು ಬೆಳೆಯಲು ವಾತಾವರಣ ಸೂಕ್ತವಾಗಿದೆ. ಹೀಗಾಗಿ ಈ ಬೆಳೆಗಳನ್ನು ಎರಡನೇ ಬೆಳೆಯಾಗಿ ಬೆಳೆಯಬಹುದಾಗಿದೆ ಎಂದರು.

ತೋಟಗಾರಿಕೆ ಇಲಾಖೆಯ ಅಧಿಕಾರಿ ನೇತ್ರಾವತಿ, ಪಶು ವೈದ್ಯಕೀಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಭರತ್ ಮಾತನಾಡಿದರು. ಆರ್‌ಎಂಒ ಶಂಭುಲಿಂಗೇಗೌಡ, ಹರಾಜು ಅಧೀಕ್ಷಕರಾದ ಧನರಾಜ್, ಸಿದ್ದರಾಮ್ ಡಾಂಗೆ, ರೈತ ಮುಖಂಡರಾದ ಮರೂರು ಚಂದ್ರೇಗೌಡ, ನಟರಾಜು, ಅಶೋಕ, ರಾಮೇಗೌಡ, ಸತೀಶ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net