

ಸಾಲಿಗ್ರಾಮ: ಇತ್ತೀಚೆಗೆ ಸುರಿದ ಬಾರಿ ಮಳೆಗೆ ವಾಸದ ಮನೆ ಗೋಡೆಗಳು ಕುಸಿದಿದ್ದ ತಾಲೂಕಿನ ತಂದ್ರೆ ಅಂಕನಹಳ್ಳಿ ಗ್ರಾಮಕ್ಕೆ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಗುರುವಾರ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿದರು.
ಗ್ರಾಮದ ನಿವಾಸಿ ಸೋಮಪ್ಪ ಮತ್ತು ಭಾಗ್ಯಮ್ಮ ಎಂಬುವರ ಮನೆ ಗೋಡೆ ಇತ್ತೀಚೆಗೆ ಕುಸಿದಿತ್ತು. ಈ ಬಗ್ಗೆ ವಿಜಯವಾಣಿಯಲ್ಲಿ ವರದಿ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಪೂರ್ಣಿಮಾ ಸ್ಥಳಕ್ಕೆ ಭೇಟಿ ನೀಡಿ ಕಷ್ಟಕ್ಕೆ ಸ್ಪಂದಿಸಿದರು. ಸರ್ಕಾರದಿಂದ ಪರಿಹಾರ ಮತ್ತು ವಾಸ ಮಾಡಲು ಆಶ್ರಯ ಮನೆ ನೀಡುವಂತೆ ಸಂತ್ರಸ್ತರು ಪೂರ್ಣಿಮಾ ಅವರ ಬಳಿ ಮನವಿ ಮಾಡಿದರು.
ರಾಜಸ್ವ ನಿರೀಕ್ಷಕ ಹೇಮಂತ್, ಗ್ರಾಮಲೆಕ್ಕಿಗ ಮುತ್ತುರಾಜ್, ಸುಂದರೇಗೌಡ, ಎ.ಎಂ.ಬಸವರಾಜು ಇತರರಿದ್ದರು