ತಂಗಲಿ ಗ್ರಾಪಂಗೆ ಸುಧಾ ಅಧ್ಯಕ್ಷೆ

kdr gp e
ತಂಗಲಿ ಗ್ರಾಪಂ ಅಧ್ಯಕ್ಷೆ ಸುಧಾ ಅವರನ್ನು ಅಭಿನಂದಿಸಲಾಯಿತು. ಕಾಂಗ್ರೆಸ್ ಮುಖಂಡ ರಾಜು ಸೇವಾಪುರ, ಆರತಿ, ಗೋವಿಂದಪ್ಪ, ರಘುರಾಮ್ ಇತರರಿದ್ದರು.
Published on

ಕಡೂರು: ತಂಗಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಸುಧಾ ಲೇಪಾಕ್ಷಿ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಅಶೋಕ್ ಕಾರ್ಯನಿರ್ವಹಿಸಿದರು. ನಂತರ ನಡೆದ ಅಭಿನಂದನಾ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ರಾಜು ಸೇವಾಪುರ ಮಾತನಾಡಿ, ಸದಸ್ಯರ ಒಗ್ಗಟ್ಟಿನ ಫಲವಾಗಿ ಆಡಳಿತ ಮಂಡಳಿ ಅಭಿವೃದ್ಧಿಗೆ ಒತ್ತುಕೊಡುತ್ತಿದೆ. ಗ್ರಾಪಂ ಪ್ರಗತಿಗೆ ಶಾಸಕ ಕೆ.ಎಸ್.ಆನಂದ್ ಅವರ ಪ್ರೋತ್ಸಾಹ ನಿರಂತರವಾಗಿರಲಿದೆ ಎಂದರು. ನೂತನ ಅಧ್ಯಕ್ಷೆ ಸುಧಾ ಮಾತನಾಡಿ, ಸದಸ್ಯರ ವಿಶ್ವಾಸ ಪಡೆದು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು. ಗ್ರಾಪಂ ಉಪಾಧ್ಯಕ್ಷೆ ಆರತಿ ಗೋವಿಂದಪ್ಪ, ರಘುರಾಮ್, ಕುಮಾರ್, ಜ್ಯೋತಿಬಾಯಿ, ಬಿ.ಟಿ.ಗಂಗಾಧರನಾಯ್ಕ, ವಿಜಯಾಬಾಯಿ, ರಮೇಶ್, ಕಾವೇರಿಬಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net