ಡ್ರಾೃಗ್‌ರೇಸ್ ಬೈಕ್ ಸವಾರರಿಗೆ ಬೀಳುತ್ತೆ 2 ಲಕ್ಷದ..!

bike
Published on

ಬೆಂಗಳೂರು : ದ್ವಿಚಕ್ರ ವಾಹನಗಳಿಗೆ ದೋಷಪೂರಿತ ಸೈಲೆನ್ಸರ್ ಅಳವಡಿಕೆ ಹಾಗೂ ವ್ಹೀಲಿಂಗ್ ಮಾಡುವ ಸವಾರರು ದಂಡಾಧಿಕಾರಿಗಳ ಮುಂದೆ ದುಬಾರಿ ಮೊತ್ತದ ಮುಚ್ಚಳಿಕೆ ಬರೆದುಕೊಳ್ಳಬೇಕಾಗುತ್ತದೆ.

ನಗರದಲ್ಲಿ ಕರ್ಕಶ ಶಬ್ಧ ಮಾಡಿಕೊಂಡು ಬೈಕ್‌ನ್ನು ಅಡ್ಡಾದಿಡ್ಡಿ ಓಡಿಸುವರ ಸಂಖ್ಯೆ ಹಾಗೂ ಬೈಕ್ ವ್ಹೀಲಿಂಗ್ ಮಾಡುವ ಸವಾರರು ದಿನೇ ದಿನೆ ಹೆಚ್ಚಾಗುತ್ತಿದ್ದಾರೆ. ಬಸವನಗುಡಿ ಸಂಚಾರ ಠಾಣೆ ಮತ್ತು ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ಪೊಲೀಸರು ದೋಷಪೂರಿತ ಸೈಲೆನ್ಸರ್ ಮತ್ತು ವ್ಹೀಲಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ್ದರು.

16 ಬೈಕ್‌ಗಳನ್ನು ಜಪ್ತಿ ಮಾಡಿ ಸವಾರರ ವಿರುದ್ಧ ಸಿಆರ್‌ಪಿಸಿ ಕಲಂ 107ರಡಿ ಪ್ರಕರಣ ದಾಖಲಿಸಿ ಪೊಲೀಸ್ ಕಮಿಷನರ್, ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಕಮಲ್ ಪಂತ್ ಮುಂಭಾಗ ಹಾಜರುಪಡಿಸಿದ್ದರು. ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡಿರುವ ಸವಾರರ ಕಡೆಯಿಂದ 50 ಸಾವಿರ ರೂ. ಮೊತ್ತದ ವೈಯಕ್ತಿಕ ಮುಚ್ಚಳಿಕೆ ಹಾಗೂ ವ್ಹೀಲಿಂಗ್ ಮಾಡುತ್ತಿದ್ದ ಸವಾರರ ಕಡೆಯಿಂದ 2 ಲಕ್ಷ ರೂ. ಮೊತ್ತದ 6 ತಿಂಗಳ ಅವಧಿಗೆ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.

ಈ ಅವಧಿಯಲ್ಲಿ ಕೃತ್ಯ ಎಸಗಿದರೆ ಎ್ಐಆರ್ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ದೋಷಪೂರಿತ ಸೈಲೆನ್ಸರ್‌ಗಳನ್ನು ಅಳವಡಿಸುವ ಗ್ಯಾರೇಜ್ ಮಾಲೀಕರ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಕಮಲ್ ಪಂತ್ ಎಚ್ಚರಿಸಿದ್ದಾರೆ.

ಈ ಮೊದಲು ದೋಷಪೂರಿತ ಸೈಲೆನ್ಸರ್ ಮತ್ತು ವ್ಹೀಲಿಂಗ್ ಮಾಡುತ್ತಿದ್ದ ಸವಾರರನ್ನು ವಶಕ್ಕೆ ಪಡೆದು ಬೈಕ್ ಜಪ್ತಿ ಮಾಡುತ್ತಿದ್ದರು. ಠಾಣೆಗೆ ಪಾಲಕರನ್ನು ಕರೆದು ಮುಚ್ಚಳಿಕೆ ಬರೆಸಿಕೊಂಡು ನಂತರ ಕೋರ್ಟ್‌ಗೆ ಹಾಜರುಪಡಿಸುತ್ತಿದ್ದರು. ನ್ಯಾಯಾಲಯ ದಂಡ ವಿಧಿಸಿ ಪ್ರಕರಣ ಮುಕ್ತಾಯಗೊಳಿಸುತ್ತಿತ್ತು. ಇದೀಗ ದುಬಾರಿ ಮೊತ್ತದ ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net