

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆ ಕಂಪ್ಯೂಟರ್ ವಿಭಾಗ ಶನಿವಾರ ಆಯೋಜಿಸಿದ್ದ ಡೇಟಾಥಾನ್ ಸ್ಪರ್ಧೆಯಲ್ಲಿ ಹಲವು ರಾಜ್ಯಗಳ ತಂಡಗಳು ಪಾಲ್ಗೊಂಡು ವಿವಿಧ ವಿಭಾಗಗಳಲ್ಲಿ ಜಯಗಳಿಸಿವೆ.
ಪೊಲೀಸ್ ಇಲಾಖೆಯಲ್ಲಿ ಈಗಾಗಲೇ ಸಂಗ್ರಹಿಸಲಾಗಿರುವ ಅಪರಾಧ ದತ್ತಾಂಶಗಳನ್ನು ಬಳಸಿಕೊಂಡು ಮುಂದೆ ಆಗಬಹುದಾದ ಅಪರಾಧಗಳನ್ನು ಊಹಿಸುವುದು ಹಾಗೂ ಅವುಗಳು ಯಾವ ಪ್ರದೇಶದಲ್ಲಿ ಮತ್ತು ಯಾವ ಸಮಯದಲ್ಲಿ ಸಂಭವಿಸುವ ಸಾಧ್ಯತೆ ಎಂದು ಅಂದಾಜಿಸುವ ಸ್ಪರ್ಧೆಯಲ್ಲಿ ಚೆನ್ನೈನ ಸೈರನ್ ಸ್ಕ್ವಾಡ್ ಈಶ್ವರಿ ಇಂಜನಿಯರಿಂಗ್ ಕಾಲೇಜು ಜಯ ಗಳಿಸಿತು.
ಸಂಚಾರ ಅರಿವು ಹಾಗೂ ದಟ್ಟಣೆ ನಿರ್ವಹಣೆ ವಿಭಾಗದಲ್ಲಿ ಚೆನ್ನೈನ ಕೋಡ್ ಒನ್ ಸೇಂಟ್ ಜೋಸೆಫ್ ಕಾಲೇಜು, ಪೊಲೀಸ್ ಕಾರ್ಯಕ್ಷಮತೆ ಮತ್ತು ಸಂಪನ್ಮೂಲ ನಿರ್ವಹಣೆ ವಿಭಾಗದಲ್ಲಿ ಮುಂಬೈನ ಲುಮಿನಾ ಪಿಲೈ ಕಾಲೇಜು ಆಫ್ ಇಂಜಿನಿಯರಿಂಗ್, ಕಾನೂನು ಜಾರಿಯಲ್ಲಿ ಡೇಟಾ ಗೋಪ್ಯತೆ ವಿಭಾಗದಲ್ಲಿ ಗಾಜಿಯಾಬಾದ್‌ನ ಶೆರಲಾಕ್ ಅಜಯ್ ಕುಮಾರ್ ಗರ್ಗ್ ಇಂಜಿನಿಯರಿಂಗ್ ಕಾಲೇಜು ಮತ್ತು ಜಿ.ಎಲ್.ಬಜಾಜ್ ಇನ್‌ಸ್ಟಿಟ್ಯೂಟ್, ಅಪಘಾತ ದತ್ತಾಂಶ ವಿಶ್ಲೇಷಣೆ ವಿಭಾಗದಲ್ಲಿ ನಾಗಾಪುರದ ಚೈರಾಸ್ತಾ ಯಶವಂತ್‌ರಾವ್ ಚೈವಾನ್ ಕಾಲೇಜ್ ಆಫ್ ಇಂಜಿನಿಯರಿಂಗ್‌ಗೆ ಪ್ರಶಸ್ತಿ ಪಡೆದುಕೊಂಡಿವೆ. ವಿಜೇತ ತಂಡಕ್ಕೆ ೧ ಲಕ್ಷ ನಗದು ಬಹುಮಾನ ನೀಡಲಾಯಿತು.