ಡೆಂೆ ರಥಕ್ಕೆ ಜಿಲ್ಲಾದಿಕಾರಿ ಚಾಲನೆ

ಡೆಂೆ ರಥಕ್ಕೆ ಜಿಲ್ಲಾದಿಕಾರಿ ಚಾಲನೆ
Published on

ಹಾಸನ: ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸೋಮವಾರ ಡೆಂೆ ರೋಗ ನಿಯಂತ್ರಣ ಜಾಗೃತಿ ಮಾಹಿತಿ ರಥಕ್ಕೆ ಜಿಲ್ಲಾಧಿಕಾರಿ ಸಿ ಸತ್ಯಭಾಮ ಅವರು ಚಾಲನೆ ನೀಡಿದರು.
ಚಾಲನೆ ನೀಡಿ ಮಾತನಾಡಿದ ಅವರು, ಡೆಂೆ ಜ್ವರ ಪ್ರಕರಣಗಳು ಹೆಚ್ಚಾಗದಂತೆ ವಹಿಸಬೇಕಾದ ಕ್ರಮಗಳಾದ ಸೊಳ್ಳೆ,ಲಾರ್ವಾಗಳ ನಾಶ, ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು ಮತ್ತು ಸೊಳ್ಳೆ ಕಡಿತದಿಂದ ಪಾರಾಗುವ ಕ್ರಮಗಳನ್ನು ಅನುಸರಿಸಲು ಸಾರ್ವಜನಿಕರಲ್ಲಿ ಅಗತ್ಯ ಆರೋಗ್ಯ ಶಿಕ್ಷಣ ಮಾಹಿತಿಯನ್ನು ನೀಡುವ ಸಲುವಾಗಿ ಈ ಡೆಂಗೀ ರಥವು ಇಂದಿನಿಂದ ಜಿಲ್ಲೆಯಾದ್ಯಂತ ಎಲ್ಲಾ ಹಳ್ಳಿಗಳಿಗೆ ಸಂಚರಿಸಲಿದೆ ಎಂದು ಮಾಹಿತಿ ನೀಡಿದರು.
ಜಿ.ಪಂ ಸಿಇಒ ಬಿ.ಆರ್ ಪೂರ್ಣಿಮಾ ಅವರು ಮಾತನಾಡಿ, ಡೆಂೆ ಜ್ವರ ಹರಡದಂತೆ ಎಚ್ಚರ ವಹಿಸಲು ಸಾರ್ವಜನಿಕರು ಸ್ವಚ್ಛತೆಯನ್ನು ಕಾಪಾಡುವುದರ ಜೊತೆಗೆ ಸೂಕ್ತ ಘನತ್ಯಾಜ್ಯ ವಿಲೇವಾರಿ ಕೈಗೊಳ್ಳುವುದು, ಜ್ವರ ಕಾಣಿಸಿದರೆ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಸ್ವಾಮಿ ಬಿ.ಎನ್, ರೋಗಗಳ ನಿಯಂತ್ರಣಾಧಿಕಾರಿ ಡಾ.ನಾಗಪ್ಪ ಜಿ.ಎಸ್, ರಾಜೇಶ್ ಕುಲಕರ್ಣಿ ಜಿಲ್ಲಾ ಎಂಟಮಾಲಜಿಸ್ಟ್ ಹಾಗೂ ಮತ್ತಿತ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net