ಡಿಸಿಸಿ ಬ್ಯಾಂಕ್‌ಗೆ ೩ ಜನ ಶಾಸಕರು ಸೇರಿದಂತೆ ೬ ಜನ ಅವಿರೋಧ ಆಯ್ಕೆ / ೧೨ ಕ್ಷೇತ್ರಗಳಿಗೆ ೨೯ ಮಂದಿ ಅಂತಿಮ ಕಣದಲ್ಲಿ / ಕೊತ್ತೂರು ಮಂಜುನಾಥ್‌ಗೆ ಬಿಜೆಪಿ ಮಾಜಿ ಶಾಸಕ ಮಗ ಬೆಂಬಲ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಕೋಲಾರ ಚಿಕ್ಕಬಳ್ಳಾಪುರ ಡಿ.ಸಿ.ಸಿ.ಬ್ಯಾಂಕಿಗೆ ಮೇ.೨೮ ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರಗಳ ವಾಪಸ್ಸಾತಿಗೆ ಶುಕ್ರವಾರ ಕಡೇ ದಿನವಾಗಿದ್ದು, ಶಾಸಕರಾದ ಕೊತ್ತೂರು ಮಂಜುನಾಥ್, ರೂಪಕಲಾ ಶಶಿಧರ್, ಎಸ್.ಎನ್.ಸುಬ್ಬಾರೆಡ್ಡಿ ಸೇರಿದಂತೆ ೬ ಕ್ಷೇತ್ರಗಳಿಂದ ೬ ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

೧೮ ಕ್ಷೇತ್ರಗಳಿಗೆ ೫೪ ಜನ ಅಭ್ಯರ್ಥಿಗಳಿಂದ ನಾಮಪತ್ರಗಳು ಸಲ್ಲಿಕೆಯಾಗಿದ್ದು, ೧೯ ಜನ ಅಭ್ಯರ್ಥಿಗಳು ನಾಮಪತ್ರಗಳನ್ನು ವಾಪಸ್ಸು ಪಡೆದಿದ್ದು, ೬ ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡು ೧೨ ಕ್ಷೇತ್ರಗಳಿಗೆ ನಡೆಯಬೇಕಾಗಿದ್ದ ಚುನಾವಣೆಯಲ್ಲಿ ೨೯ ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಕೆ.ಜಿ.ಎಫ್. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿAದ ಶಾಸಕಿ ರೂಪಕಲಾ ಅವಿರೋಧವಾಗಿ, ಬಾಗೇಪಲ್ಲಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿAದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಮಾಲೂರು ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿAದ ಡಿ.ಎನ್.ರಮೇಶ್, ಶಿಡ್ಲಘಟ್ಟ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿAದ ಎನ್.ನಾಗರಾಜ್, ಮಂಚೇನಹಳ್ಳಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿAದ ಜೆ.ವಿ.ಹನುಮೇಗೌಡ ಹಾಗೂ ಕೋಲಾರ ಚಿಕ್ಕಬಳ್ಳಾಪುರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳಿAದ ಮುಳಬಾಗಿಲು ಶಾಸಕ ಕೊತ್ತೂರು ಜಿ.ಮಂಜುನಾಥ್ ಇವರುಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಬಿಜೆಪಿ ಬೆಂಬಲದಿAದ ಕೊತ್ತೂರು ಗೆಲುವು :

ಕೆ.ಜಿ.ಎಫ್. ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳಿAದ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ಕೆ.ಜಿ.ಎಫ್.ಮಾಜಿ ಶಾಸಕ ವೈ.ಸಂಪAಗಿ ಪುತ್ರ ಎಸ್.ಪ್ರವೀಣ್ ಕುಮಾರ್ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದ. ಶುಕ್ರವಾರ ಎಸ್.ಪ್ರವೀಣ್‌ಕುಮಾರ್ ನಾಮಪತ್ರ ವಾಪಸ್ಸು ಪಡೆಯುವ ಮೂಲಕ ಕೊತ್ತೂರು ಮಂಜುನಾಥ್ ಅವಿರೋಧವಾಗಿ ಆಯ್ಕೆ ಆಗಲು ಸಹಕಾರಿಯಾಗಿದೆ.

ಪ್ರವೀಣ್ ಕುಮಾರ್ ನಾಮಪತ್ರ ವಾಪಸ್ಸು ಪಡೆಯದಂತೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಕಡೆಯಿಂದ ಒತ್ತಡವು ಬಂದಿತ್ತು ಎನ್ನಲಾಗಿದೆ. ಆದರೆ ಪ್ರವೀಣ್‌ಕುಮಾರ್ ಬಿಜೆಪಿ ಮುಖಂಡರ ಕೈಗೆ ಸಿಗದೆ ನಾಮಪತ್ರ ವಾಪಸ್ಸು ಪಡೆದಿದ್ದಾರೆ. ಕಾಂಗ್ರೇಸ್‌ನ ಒಂದು ಗುಂಪು ಮತ್ತು ಜೆಡಿಎಸ್ ಮತ್ತು ಬಿಜೆಪಿಯವರು ಕೊತ್ತೂರು ಮಂಜುನಾಥ್ ಅವಿರೋಧವಾಗಿ ಆಯ್ಕೆ ಆಗಲು ಬಿಡಬಾರದು ಹಾಗೂ ಚುನಾವಣೆ ನಡೆದರೆ ಕೊತ್ತೂರು ಮಂಜುನಾಥ್ ರವರನ್ನು ಸೋಲಿಸಬೇಕೆಂದು ಸಿದ್ಧತೆಯಲ್ಲಿದ್ದರು. ನಾಮಪತ್ರ ವಾಪಸ್ಸು ಪಡೆದು ಅವಿರೋಧ ಆಯ್ಕೆ ಘೋಷಣೆ ಆಗುತ್ತಿದ್ದಂತೆ ಬಿಜೆಪಿ ಜೆಡಿಎಸ್ ಮೈತ್ರಿಗಿಂತ ಕಾಂಗ್ರೇಸ್‌ನ ಒಂದು ಗುಂಪಿಗೆ ಮರ್ಮಾಪಘಾತ ಉಂಟಾಗಿದೆ.

ಕೊತ್ತೂರು ಮುಯ್ಯಿ ತೀರಿಸಿಕೊಂಡ ಮುನಿಸ್ವಾಮಿ :

ಕಳೆದ ಬಾರಿ ಮಾಜಿ ಸಂಸದ ಮುನಿಸ್ವಾಮಿ ಸಂಸದರಾಗಿ ಆಯ್ಕೆ ಆಗಲು ಕೊತ್ತೂರು ಮಂಜುನಾಥ್ ಭರ್ಜರಿ ಪ್ರಚಾರ ಕೈಗೊಂಡಿದ್ದರು. ಆಗ ಕೊತ್ತೂರು ಮಂಜುನಾಥ್ ಕಾಂಗ್ರೇಸ್‌ಗೆ ಸೇರ್ಪಡೆಗೊಂಡಿರಲಿಲ್ಲ. ಈಗ ಮುನಿಸ್ವಾಮಿ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕಿಗೆ ಅವಿರೋಧ ಆಯ್ಕೆ ಆಗಲು ಸಹಕಾರ ನೀಡಿದ್ದಾರೆ ಎನ್ನಲಾಗುತ್ತಿದೆ.

ಬಾಕ್ಸ್

ಮುಳುಗಿದ್ದ ಬ್ಯಾಂಕ್‌ನ್ನು ಮೇಲೆತ್ತಿದ ಗೋವಿಂದಗೌಡ ಅವಿರೋಧವಾಗಿ ಆಯ್ಕೆಯಾಗಲು ಕಾಂಗ್ರೇಸ್‌ನವರೇ ಅಡ್ಡಗಾಲು ಹಾಕಿ, ಮಾಲೂರು ತಾಲ್ಲೂಕಿನ ಶ್ರೀನಿವಾಸ್ ಎಂಬುವವರನ್ನು ಅಭ್ಯರ್ಥಿಯಾಗಿ ಕಣದಲ್ಲಿ ಮುಂದುವರೆಯುವAತೆ ಮಾಡಿದ್ದಾರೆ. ಇದರಿಂದ ಗೋವಿಂದೇಗೌಡ ಚುನಾವನೆಯನ್ನು ಎದುರಿಸುವಂತೆ ಆಗಿದೆ.

ಬಾಕ್ಸ್

ಅಂತಿಮ ಕಣದಲ್ಲಿ ಉಳಿದಿರುವ ೧೨ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಳ್ಳಲು ಕೊತ್ತೂರು ಮಂಜುನಾಥ್ ಅವಿರೋಧವಾಗಿ ಆಯ್ಕೆ ಆಗಲು ಬಿಜೆಪಿಯವರೇ ಸಹಕರಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಬ್ಯಾಂಕಿನ ವಿರುದ್ಧ ಬಿಜೆಪಿಯವರು ಬುಸುಗುಡುತ್ತಿದ್ದರು. ನಂತರ ಸ್ವಪಕ್ಷೀಯವರಾದ ಕಾಂಗ್ರೇಸ್‌ನವರು ಬ್ಯಾಂಕಿಗೆ ಚುನಾವಣೆ ನಡೆಯದಂತೆ ೨ ವರ್ಷಗಳ ಕಾಲ ಅಡ್ಡಿಪಡಿಸಿದ್ದರು ಎನ್ನಲಾಗಿದೆ.

೧೨ ಕ್ಷೇತ್ರಗಳಿಗೆ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು :

ಕೋಲಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಎಂ.ಆನAದ್‌ಕುಮಾರ್, ಕೆ.ಎಂ.ಮುನಿರಾಜು ಕಣದಲ್ಲಿ ಉಳಿದಿದ್ದಾರೆ.

ಬಂಗಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ವಿ.ಮಾರ್ಕೋಂಡೇಗೌಡ, ಕೆ.ಎಸ್.ರಂಗನಾಥಚಾರಿ ಕಣದಲ್ಲಿ ಉಳಿದಿದ್ದಾರೆ.

ಮುಳಬಾಗಿಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಆರ್.ಅಮರನಾರಾಯಣಪ್ಪ, ವಿ.ರಘುಪತಿರೆಡ್ಡಿ, ಎಂ.ಸಿ.ಸರ್ವಜ್ಞಗೌಡ ಕಣದಲ್ಲಿ ಉಳಿದಿದ್ದಾರೆ.

ಶ್ರೀನಿವಾಸಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಎ.ಸಿ.ನಾಗರತ್ನಮ್ಮ, ಬಿ.ಎನ್.ಶಶಿಕುಮಾರ್, ಬಿ.ವಿ.ಸುರೇಶ್‌ರೆಡ್ಡಿ ಕಣದಲ್ಲಿ ಉಳಿದಿದ್ದಾರೆ.

ಚಿಂತಾಮಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಜಿ.ಚಂದ್ರಾರೆಡ್ಡಿ, ಎನ್.ನಾಗಿರೆಡ್ಡಿ ಕಣದಲ್ಲಿ ಉಳಿದಿದ್ದಾರೆ.

ಚಿಕ್ಕಬಳ್ಳಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಎ.ವಿ.ಅಕ್ಕಲರೆಡ್ಡಿ, ಎಂ.ಎನ್.ಕೃಷ್ಣಮೂರ್ತಿ, ಪಿ.ಎನ್.ಮುನೇಗೌಡ, ಎನ್.ಮಂಜುನಾಥರೆಡ್ಡಿ ಕಣದಲ್ಲಿ ಉಳಿದಿದ್ದಾರೆ.

ಗುಡಿಬಂಡೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಕೆ.ಜೆ.ಆನಂದರೆಡ್ಡಿ, ಹೆಚ್.ಎನ್.ಮಂಜುನಾಥರೆಡ್ಡಿ ಕಣದಲ್ಲಿ ಉಳಿದಿದ್ದಾರೆ.

ಗೌರಿಬಿದನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಕೆ.ಎನ್.ವೆಂಕಟರಾಮರೆಡ್ಡಿ, ಹನುಮಂತರೆಡ್ಡಿ ಕಣದಲ್ಲಿ ಉಳಿದಿದ್ದಾರೆ.

ಚೋಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಕೆ.ವಿ.ಭಾಸ್ಕರರೆಡ್ಡಿ, ಪಿ.ಎನ್.ಮಂಜುನಾಥರೆಡ್ಡಿ, ಬಿ.ಶೇಖರ್ ಕಣದಲ್ಲಿ ಉಳಿದಿದ್ದಾರೆ.

----------------------------------------------------------------------------------

ಕೋಲಾರ ಜಿಲ್ಲೆಯ ಹಾಲು ಒಕ್ಕೂಟದ ಸಹಕಾರ ಸಂಘಗಳಿAದ ಹೆಚ್.ವಿ.ವಿನೋದ್‌ಕುಮಾರ್, ಕೆ.ಶಿವಾನಂದ ಅಂತಿಮ ಕಣದಲ್ಲಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಒಕ್ಕೂಟದ ಸಹಕಾರ ಸಂಘಗಳಿAದ ಹೆಚ್.ಎಸ್.ಮೋಹನ್‌ರೆಡ್ಡಿ, ಎಂ.ರಾಮಯ್ಯ ಅಂತಿಮ ಕಣದಲ್ಲಿದ್ದಾರೆ.

---------------------------------------------------------------------------------------

ಡಿಸಿಸಿ ಬ್ಯಾಂಕಿನ ಕಾರ್ಯವ್ಯಾಪ್ತಿಗೆ ಇತರೆ ಸಹಕಾರ ಸಂಘಗಳಿAದ ಬ್ಯಾಲಹಳ್ಳಿ ಎಂ.ಗೋವಿAದೇಗೌಡ, ಬಿ.ಆರ್.ಶ್ರೀನಿವಾಸ್ ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಚಿತ್ರ ೨೩ ಕೆ.ಎಲ್.ಆರ್. ೦೩ : ಶಾಸಕ ಕೊತ್ತೂರು ಜಿ.ಮಂಜುನಾಥ್ ರವರ ಭಾವಚಿತ್ರ

ಚಿತ್ರ ೨೩ ಕೆ.ಎಲ್.ಆರ್. ೦೩ಎ : ಶಾಸಕಿ ರೂಪಕಲಾ ಎಂ.ಶಶಿಧರ್ ರವರ ಭಾವಚಿತ್ರ

ಚಿತ್ರ ೨೩ ಕೆ.ಎಲ್.ಆರ್. ೦೩ಬಿ : ಎಸ್.ಎನ್.ಸುಬ್ಬಾರೆಡ್ಡಿ ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net