

ಕೋಲಾರ : ಕ್ಷೇತ್ರದ ಶಾಸಕ ಕೆ.ಶ್ರೀನಿವಾಸಗೌಡ ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುವಾರ್ ಅವರನ್ನು ಭೇಟಿಯಾಗಿ ಪ್ರಸಕ್ತ ರಾಜಕೀಯದ ಬಗ್ಗೆ ಚರ್ಚಿಸಿರುವುದು ಜೆಡಿಎಸ್‌ನಲ್ಲಿ ಸಂಚಲವನ್ನುಂಟು ವಾಡಿದೆ.
ಜಿಲ್ಲೆಯ ಅಭಿವದ್ಧಿ ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಸಹಕರಿಸಿರುವ ಶಾಸಕ ಕೆ.ಆರ್.ರಮೇಶ್ ಕುವಾರ್ ಜತೆ ಗುರುತಿಸಿಕೊಂಡಿರುವುದರಿಂದ ಸಿಟ್ಟಾಗಿರುವ ದಳಪತಿಗಳಾದ ವಾಜಿ ಪಿಎಂ ಎಚ್.ಡಿ.ದೇವೇಗೌಡ ಹಾಗೂ ವಾಜಿ ಸಿಎಂ ಎಚ್.ಡಿ.ಕುವಾರಸ್ವಾಮಿ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಹೇಳಿಕೆ ನೀಡಿರುವುದರಿಂದ ಬೇಸತ್ತು ತಮ್ಮ ಮುಂದಿನ ರಾಜಕೀಯಕ್ಕಾಗಿ ಹಾಗೂ ಬರಲಿರುವ ಜಿಪಂ ಚುನಾವಣೇಗೆ ತಮ್ಮ ಮಗನನ್ನು ಸುಗಟೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ವಾಡುವಂತೆ ಕೋರಲು ಡಿ.ಕೆ.ಶಿವಕುವಾರ್ ಅವರೊಂದಿಗೆ ಮಹತ್ವದ ಚರ್ಚೆ ನಡೆಸಿರಬಹುದು ಎನ್ನಲಾಗಿದೆ.
ಸುಗಟೂರು ಹೋಬಳಿ ಕೋಲಾರ ತಾಲೂಕಿಗೆ ಸೇರಿದ್ದರೂ ಇಲ್ಲಿನ ಮತದಾರರು ಶ್ರೀನಿವಾಸಪುರ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಈ ಭಾಗದಲ್ಲಿ ನಡೆದಿರುವ ಅನೇಕ ಕಾರ್ಯಕ್ರಮಗಳಲ್ಲಿ ರಮೇಶ್‌ಕುವಾರ್ ಜತೆ ವೇದಿಕೆ ಹಂಚಿಕೊಂಡು ರಮೇಶ್‌ಕುವಾರ್ ಅವರನ್ನು ಹಾಡಿ ಹೊಗಳಿ, ಮುಂದಿನ ಚುನಾವಣೆಯಲ್ಲೂ ಇವರನ್ನೇ ಗೆಲ್ಲಿಸಬೇಕೆಂದು ಕರೆ ನೀಡಿರುವುದರ ವಿರುದ್ಧ ಕೋಲಾರ ಮತ್ತು ಶ್ರೀನಿವಾಸಪುರ ಕ್ಷೇತ್ರದ ದಳದ ಮುಖಂಡರು ದೊಡ್ಡ ಹಾಗೂ ಚಿಕ್ಕ ಗೌಡರಿಗೆ ದೂರು ನೀಡಿದ್ದರು.
ಇದರಿಂದ ಕುಪಿತರಾಗಿರುವ ಎಚ್.ಡಿ.ದೇವೇಗೌಡರು ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ್ದರು. ಪಕ್ಷ ತಮ್ಮನ್ನು ಕಡೆಗಣಿಸುತ್ತಿದೆ ಎಂಬ ಕಾರಣಕ್ಕೆ ಕಳೆದ ವರ್ಷದಿಂದಲೂ ಸಮಯಕ್ಕೆ ಕಾಯುತ್ತಿದ್ದ ಶ್ರೀನಿವಾಸಗೌಡರು ಮಗನನ್ನು ಜಿಪಂ ಚುನಾವಣೆಗೆ ಕಾಂಗ್ರೆಸ್‌ನಿಂದ ಕಣಕ್ಕಿಳಿಸುವ ನಿರ್ಧಾರ ಕೈಗೊಂಡು ಶಾಸಕ ರಮೇಶ್ ಕುವಾರ್‌ಗೆ ಮತ್ತಷ್ಟು ಹತ್ತಿರವಾಗಿದ್ದರಿಂದ ದಳಪತಿಗಳು ಶ್ರೀನಿವಾಸಗೌಡರ ವಿರುದ್ಧ ಕೆಂಡಾಮಂಡಲವಾಗಿದ್ದರು.
ಕೆ.ಸಿ.ವ್ಯಾಲಿ ಯೋಜನೆ ಬಗ್ಗೆ ಜಿಲ್ಲೆಯ ಜೆಡಿಎಸ್ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಎಚ್‌ಡಿಕೆ ಅವರದ್ದು ಒಂದು ನಿಲುವಾದರೆ, ಶ್ರೀನಿವಾಸಗೌಡರು ರಮೇಶ್ ಕುವಾರ್ ಬೆಂಬಲಕ್ಕೆ ನಿಂತಿದ್ದರಿಂದ ಕೆಂಗಣ್ಣಿಗೆ ಗುರಿಯಾಗಿದ್ದರು. ಜತೆಗೆ ಪಕ್ಷದ ಅನುಮತಿ ಇಲ್ಲದೆ ಮುಖ್ಯಮಂತ್ರಿಗಳನ್ನು ಭೇಟಿಯಾದ ಕಾಂಗ್ರೆಸ್ ಶಾಸಕರ ನಿಯೋಗದಲ್ಲಿ ಕಾಣಿಸಿಕೊಂಡಿದ್ದರಿಂದ ಶಿಸ್ತಿನ ಕ್ರಮ ಗ್ಯಾರಂಟಿ ಎಂದು ಭಾವಿಸಿ ಮುಂದಿನ ರಾಜಕೀಯ ನಡೆಗೆ ಬೆಂಬಲ ಪಡೆಯುವ ಸಲುವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುವಾರ್ ಅವರನ್ನು ಭೇಟಿ ಆಗಿರಬಹುದು ಎನ್ನಲಾಗಿದೆ.
ಇದಕ್ಕೆ ಪುಷ್ಟಿ ಎನ್ನುವ ರೀತಿಯಲ್ಲಿ ಶ್ರೀನಿವಾಸಗೌಡ ಮತ್ತು ಡಿ.ಕೆ.ಶಿವಕುವಾರ್ ಭೇಟಿಯಾಗಿರುವ ಚಿತ್ರ ಸಾವಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ದಳಪತಿಗಳ ಸಿಟ್ಟು ಇನ್ನಷ್ಟು ಹೆಚ್ಚಲು ಅವಕಾಶ ವಾಡಿರುವುದರಿಂದ ಶಿಸ್ತಿನ ಕ್ರಮದ ಆದೇಶ ಹೊರ ಬೀಳಬಹುದೆಂಬ ವಾತು ಜೆಡಿಎಸ್ ವಲಯದಿಂದ ಕೇಳಿ ಬಂದಿದೆ.
2004ರಲ್ಲಿ ಜನತಾ ಪರಿವಾರಕ್ಕೆ ಗುಡ್‌ಬೈ ಹೇಳಿ ಕಾಂಗ್ರೆಸ್ ಸೇರಿದ್ದ ಶ್ರೀನಿವಾಸಗೌಡರು ವಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರೊಂದಿಗಿನ ಭಿನ್ನಮತದಿಂದ ಅವಾನತುಗೊಂಡ ಹಿನ್ನೆಲೆಯಲ್ಲಿ ಕೈ ಟಿಕೆಟ್‌ನಿಂದ ವಂಚಿತರಾಗಿ ಮತ್ತೆ ಜೆಡಿಎಸ್ ಸೇರಿದ್ದರು. ಗೌಡರು ಜೆಡಿಎಸ್‌ನಿಂದ ಹೊರ ಬಂದಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಅಗ್ನಿ ಪರೀಕ್ಷೆಗೆ ಗುರಿಯಾಗಬಹುದು.
ಕೋಟ್ಸ್))) ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುವಾರ್ ಅವರ ಭೇಟಿಯಲ್ಲಿ ವಿಶೇಷತೆ ಏನೂ ಇಲ್ಲ, ಅದೊಂದು ಸೌಹಾರ್ದ ಭೇಟಿ. ಶಾಸಕ ರಮೇಶ್ ಕುವಾರ್ ಅವರನ್ನು ಜಿಲ್ಲೆಯ ಅಭಿವದ್ಧಿಗಾಗಿ ಬೆಂಬಲಿಸುತ್ತಿದ್ದೇನೆ, ಜೆಡಿಎಸ್ ಬಿಡುವ ಉದ್ದೇಶವಿಲ್ಲ, ಆದರೆ ಪಕ್ಷಕ್ಕೆ ನನ್ನ ಅವಶ್ಯಕತೆ ಇಲ್ಲವೆಂಬಂತೆ ಕೆಲವರು ನಡೆದುಕೊಳ್ಳುತ್ತಿದ್ದಾರೆ, ಶಿಸ್ತು ಕ್ರಮದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ, ಇದರಿಂದ ನನ್ನ ಆತ್ಮಗೌರವಕ್ಕೆ ಧಕ್ಕೆಯಾಗಿದೆ. ಕ್ಷೇತ್ರದ ನಮ್ಮ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯ, ಸಲಹೆ ಪ್ರಕಾರ ಮುಂದಿನ ರಾಜಕೀಯ ತೀರ್ವಾನ ತೆಗೆದುಕೊಳ್ಳುವೆ. ಕೆ.ಶ್ರೀನಿವಾಸಗೌಡ, ಶಾಸಕ, ಕೋಲಾರ
ಶಾಸಕ ಕೆ.ಶ್ರೀನಿವಾಸಗೌಡರನ್ನು ಪಕ್ಷದಿಂದ ಹೊರ ಹಾಕುವ ಉದ್ದೇಶವಿಲ್ಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುವಾರ್ ಅವರನ್ನು ಯಾವ ಕಾರಣಕ್ಕೆ ಭೇಟಿಯಾಗಿದ್ದಾರೋ ಗೊತ್ತಿಲ್ಲ, ಶ್ರೀನಿವಾಸಗೌಡರು ಪಕ್ಷದಲ್ಲಿ ಇರುವುದು ಬಿಡುವುದು ಅವರ ವೈಯಕ್ತಿಕ ವಿಚಾರ, ಒಂದು ವೇಳೆ ಪಕ್ಷ ತೊರೆದರೂ ನಷ್ಟವೇನಿಲ್ಲ. ಜಿ.ಕೆ.ವೆಂಕಟಶಿವಾರೆಡ್ಡಿ, ವಾಜಿ ಶಾಸಕ, ಜೆಡಿಎಸ್ ಜಿಲ್ಲಾಧ್ಯಕ್ಷ, ಕೋಲ