ಡಿ.ಸಿ.ಸಿ.ಬ್ಯಾಂಕ್ ಚುನಾವಣೆಗೆ ನಾಮಪತ್ರ ಪರಿಶೀಲನೆ / ೫೪ ಮಂದಿ ಅಭ್ಯರ್ಥಿಗಳ ನಾಮಪತ್ರಗಳು ಸಿಂಧುತ್ವ / ಶಾಸಕಿ ರೂಪಕಲಾ ಮತ್ತು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವಿರೋಧ ಆಯ್ಕೆ ಸಾಧ್ಯತೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿಗೆ ಮೇ.೨೮ ರಂದು ನಡೆಯಲಿರುವ ೧೮ ನಿರ್ದೇಶಕರ ಸ್ಥಾನಗಳ ಚುನಾವಣೆಗೆ ಬುಧವಾರ ನಾಮಪತ್ರಗಳ ಪರಿಶೀಲನೆ ನಡೆದು ೫೪ ಅಭ್ಯರ್ಥಿಗಳ ನಾಮಪತ್ರಗಳು ಚುನಾವಣೆಗೆ ಸಿಂಧುತ್ವ ಹೊಂದಿರುವುದಾಗಿ ಚುನಾವಣೆ ಅಧಿಕಾರಿ ಡಾ.ಮೈತ್ರಿ ಪ್ರಕಟಣೆ ಮಾಡಿದ್ದಾರೆ.

ಕೆ.ಜಿ.ಎಫ್. ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿAದ ಶಾಸಕಿ ರೂಪಕಲಾ ರವರಿಂದ ಏಕೈಕ ನಾಮಪತ್ರ ಸಲ್ಲಿಕೆಯಾಗಿದ್ದು, ಅವಿರೋಧ ಆಯ್ಕೆ ಆಗುವ ಸಾಧ್ಯತೆ ಇದೆ. ಹಾಗೂ ಬಾಗೇಪಲ್ಲಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿAದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರ ಏಕೈಕ ನಾಮಪತ್ರ ಸಲ್ಲಿಕೆಯಾಗಿರುವ ಕಾರಣ ಇವರೂ ಸಹ ಅವಿರೋಧ ಆಯ್ಕೆ ಆಗುವ ಸಾಧ್ಯತೆ ಇದೆ.

ಗುರುವಾರ ಶುಕ್ರವಾರ ನಾಮಪತ್ರಗಳ ವಾಪಸ್ಸಾತಿಗೆ ಕಡೇ ದಿನವಾಗಿರುವ ೧೮ ನಿರ್ದೇಶಕರ ಸ್ಥಾನಕ್ಕೆ ಎಷ್ಟು ಅಭ್ಯರ್ಥಿಗಳು ಕಣದಲ್ಲಿ ಉಳಿಯುತ್ತಾರೆ ಎಂಬುದು ನಾಮಪತ್ರಗಳ ವಾಪಸ್ಸಾತಿಯ ನಂತರ ತಿಳಿಯಲಿದೆ.

ನಾಮಪತ್ರಗಳನ್ನು ಸಲ್ಲಿಸಿರುವ ಕ್ಷೇತ್ರವಾರು ಅಭ್ಯರ್ಥಿಗಳ ವಿವರ :

ಕೋಲಾರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿAದ ಎಂ.ಆನAದಕುಮಾರ್, ಕೆ.ವಿ.ದಯಾನಂದ್, ಕೆ.ಎನ್.ಮುನಿರಾಜು ಅಭ್ಯಥಿಘಳಾಗಿದ್ದಾರೆ.

ಮಾಲೂರು ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿAದ ಇ.ಮುನಿಸ್ವಾಮಿ, ರಮೇಶ್.ಡಿ.ಎನ್ ಅಭ್ಯರ್ಥಿಗಳಾಗಿದ್ದಾರೆ.

ಬಂಗಾರಪೇಟೆ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿAದ ವಿ.ಮಾರ್ಕೋಂಡೇಗೌಡ, ಕೆ.ಎಸ್.ರಂಗಾಚಾರಿ ಅಭ್ಯರ್ಥಿಗಳಾಗಿದ್ದಾರೆ.

ಕೆ.ಜಿ.ಎಫ್.ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿAದ ಶಾಸಕಿ ಎಂ.ರೂಪಕಲಾ ಶಶಿಧರ್ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಮುಳಬಾಗಿಲು ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿAದ ಆರ್.ಅಮರನಾರಾಯಣಪ್ಪ, ವಿ.ರಘುಪತಿರೆಡ್ಡಿ, ಎಂ.ಸಿ.ಸರ್ವಜ್ಞೇಗೌಡ ಅಭ್ಯರ್ಥಿಗಳಾಗಿದ್ದಾರೆ.

ಶ್ರೀನಿವಾಸಪುರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿAದ ಎ.ಸಿ.ನಾಗರತ್ನಮ್ಮ, ಬಿ.ಎಸ್.ಶಶಿಕುಮಾರ್, ಬಿ.ವಿ.ಸುರೇಶ್‌ರೆಡ್ಡಿ ಅಭ್ಯರ್ಥಿಗಳಾಗಿದ್ದಾರೆ.

ಚಿಂತಾಮಣಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿAದ ಜಿ.ಚಂದ್ರಾರೆಡ್ಡಿ, ಎನ್.ನಾಗಿರೆಡ್ಡಿ, ಎಂ.ಶ್ರೀನಿವಾಸಪ್ಪ ಮತ್ತು ಎನ್.ಎಂ.ಸುಬ್ಬಾರೆಡ್ಡಿ ಅಭ್ಯರ್ಥಿಗಳಾಗಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿAದ ಎ.ನಾಗರಾಜು, ಡಿ.ಹೆಚ್.ನಾಗರಾಜು ಅಭ್ಯರ್ಥಿಗಳಾಗಿದ್ದಾರೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿAದ ಎ.ವಿ.ಅಕ್ಕಲರೆಡ್ಡಿ, ಎಂ.ಎನ್.ಕೃಷ್ಣಮೂರ್ತಿ, ಕೆ.ತಮ್ಮೇಗೌಡ, ಪಿ.ಎನ್.ಮುನೇಗೌಡ, ಎನ್.ಮಂಜುನಾಥ್ ಅಭ್ಯರ್ಥಿಗಳಾಗಿದ್ದಾರೆ.

ಗುಡಿಬಂಡೆ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿAದ ಕೆ.ಜೆ.ಆನಂದರೆಡ್ಡಿ, ಹೆಚ್.ಎನ್.ಮಂಜುನಾಥರೆಡ್ಡಿ ಅಭ್ಯರ್ಥಿಗಳಾಗಿದ್ದಾರೆ.

ಬಾಗೇಪಲ್ಲಿ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿAದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರಿಂದ ಏಕೈಕ ಅಭ್ಯರ್ಥಿಗಳಾಗಿದ್ದಾರೆ.

ಗೌರಿಬಿದನೂರು ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿAದ ಎಸ್.ಜಿ.ಲಕ್ಷಿö್ಮÃನಾರಾಯಣ, ಸಿ.ಹೆಚ್.ಲೆಂಕಪ್ಪ, ಕೆ.ಎನ್.ವೆಂಕಟರಾಮರೆಡ್ಡಿ, ಹನುಮಂತರೆಡ್ಡಿ ಅಭ್ಯರ್ಥಿಗಳಾಗಿದ್ದಾರೆ.

ಚೋಳೂರು ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿAದ ಕೆ.ವಿ.ಭಾಸ್ಕರ್‌ರೆಡ್ಡಿ, ಪಿ.ಮುತ್ತಿರೆಡ್ಡಿ, ಪಿ.ಎನ್.ಮಂಜುನಾಥರೆಡ್ಡಿ, ಬಿ.ಶೇಖರ್ ಅಭ್ಯರ್ಥಿಗಳಾಗಿದ್ದಾರೆ.

ಮಂಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿAದ ಪಿ.ಎನ್.ಜಗನ್ನಾಥ್, ಜೆ.ವಿ.ಹನುಮೇಗೌಡ ಅಭ್ಯರ್ಥಿಗಳಾಗಿದ್ದಾರೆ.

ಬ್ಯಾಂಕಿನ ವ್ಯಾಪ್ತಿಗೆ ಬರುವ ಕೋಲಾರ ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳಿAದ ಜೆ.ವಿ.ಹನುಮೇಗೌಡ, ಎಸ್.ಪ್ರವೀಣ್‌ಕುಮಾರ್, ಮುಳಬಾಗಿಲು ಶಾಸಕ ಜಿ.ಮಂಜುನಾಥ್ ಅಭ್ಯರ್ಥಿಗಳಾಗಿದ್ದಾರೆ.

ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘಗಳಿAದ ಎಸ್.ವಿ.ಗೋವರ್ಧನರೆಡ್ಡಿ, ಹೆಚ್.ವಿ.ವಿನೋದ್‌ಕುಮಾರ್, ಕೆ.ಶಿವಾನಂದ, ಪಿ.ಸುರೇಶ ಅಭ್ಯರ್ಥಿಗಳಾಗಿದ್ದಾರೆ.

ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳಿAದ ಕೆ.ಗುಡಿಯಪ್ಪ, ಎಸ್.ಎನ್.ಚಿನ್ನಪ್ಪ, ಕೆ.ವಿ.ದ್ಯಾವಪ್ಪ, ಸಿ.ಸಿ.ನಾಗೇಶ್, ಹೆಚ್.ಎಸ್.ಮೋಹನ್‌ರೆಡ್ಡಿ, ಎಂ.ರಾಮಯ್ಯ, ಎಸ್.ಪಿ.ಸುಬ್ಬಾರೆಡ್ಡಿ ಅಭ್ಯರ್ಥಿಗಳಾಗಿದ್ದಾರೆ.

ಬ್ಯಾಂಕಿನ ವ್ಯಾಪ್ತಿಗೆ ಬರುವ ಇತರೆ ಸಹಕಾರ ಸಂಘಗಳಿAದ ಬ್ಯಾಂಕಿನ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿAದಗೌಡ, ಎಸ್.ಆರ್. ಮುರಳೀಗೌಡ, ಬಿ.ಆರ್.ಶ್ರೀನಿವಾಸ್ ಅಭ್ಯರ್ಥಿಗಳಾಗಿದ್ದಾರೆ.

ಚಿತ್ರ ೨೧ ಕೆ.ಎಲ್.ಆರ್. ೦೧ : ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರ ಭಾವಚಿತ್ರ

ಚಿತ್ರ ೨೧ ಕೆ.ಎಲ್.ಆರ್. ೦೧ಎ : ಶಾಸಕಿ ಎಂ.ರೂಪಕಲಾ ಶಶಿಧರ್ ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net