

ದೇವದುರ್ಗ, ಮಾಜಿ ಸಿಎಂ ಡಿ.ದೇವರಾಜು ಅರಸು, ಜನ್ಮದಿನದ ಕಾರ್ಯಕ್ರಮ,
Devadurga, former CM D. Devaraju Arasu, birthday program,
ದೇವದುರ್ಗ: ಮಾಜಿ ಸಿಎಂ ಡಿ.ದೇವರಾಜು ಅರಸು ಮೇಧಾವಿ ರಾಜಕಾರಣಿಯಾಗಿದ್ದರು. ಹಿಂದುಳಿದ ವರ್ಗಗಳ ನಾಯಕರಾಗಿದ್ದು, ಭೂ ಸುಧಾರಣೆ, ಋಣಮುಕ್ತ ಕಾಯ್ದೆ ಹಾಗೂ ಬಡವರ ಪರ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಮನೆಮಾತಾಗಿದ್ದಾರೆ ಎಂದು ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಡಿ.ದೇವರಾಜು ಅರಸು ಜನ್ಮದಿನದ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಡಿ.ದೇವರಾಜು ಅರಸು ಎಲ್ಲ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಎಂದರು. ಹಿಂದುಳಿದ ವರ್ಗಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಶರಣಗೌಡ ಸುಂಕೇಶ್ವರಹಾಳ ಮಾತನಾಡಿ, ಊಳುವವನಿಗೆ ಭೂಮಿ, ಹಾವನೂರು ಆಯೋಗ ರಚನೆ ಇತ್ಯಾದಿ ಪ್ರಮುಖ ನಿರ್ಧಾರಗಳಿಂದ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗುತ್ತಿದೆ ಎಂದು ಹೇಳಿದರು.