ಡಿ.ದೇವರಾಜ ಅರಸು ನನ್ನ ಪಾಲಿನ ದೇವರು

9
Published on

ನಾನು ಎಂದಿಗೂ ದೇವರನ್ನು ಕಂಡಿಲ್ಲ. ಆದರೆ ಡಿ.ದೇವರಾಜ ಅರಸು ಅವರೇ ನನ್ನ ಪಾಲಿನ ದೇವರು ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು.

ನಗರದ ಇಂಜಿನಿಯರಿಂಗ್ ಸಂಸ್ಥೆಯ ಸಭಾಂಗಣದಲ್ಲಿ ಅನ್ವೇಷಣಾ ಸೇವಾ ಟ್ರಸ್ಟ್ ಹಾಗೂ ಅರಸು ಜಾಗೃತಿ ಅಕಾಡೆಮಿ ಟ್ರಸ್ಟ್ ವತಿಯಿಂದ ಸೋಮವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 43ನೇ ಸ್ಮರಣೆ ಹಾಗೂ ಧ್ವನಿ ಕೊಟ್ಟ ಧಣಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯಕ್ಕೆ ಡಿ.ದೇವರಾಜ ಅರಸು ಕೊಟ್ಟ ಕೊಡುಗೆ ಇಡೀ ದೇಶಕ್ಕೆ ಮಾದರಿಯಾಗಿದೆ. ಸಾಮಾಜಿಕ ಕಳಕಳಿಯಿಂದ ಸಮಾಜಮುಖಿಯಾಗಿ ಕೆಲಸ ಮಾಡಿದ್ದಾರೆ. ಅವರು ಯಾವುದೇ ಜಾತಿ ಹಂಗಿಲ್ಲದ ನಿಷ್ಪಕ್ಷಪಾತವಾದ ಆಡಳಿತ ನಡೆಸಿದ್ದಾರೆ. ಅಂದಿನ ದಿನಗಳಲ್ಲಿಯೇ ಎಲ್ಲ ವರ್ಗದ ಜನರ ಸಾಲಮನ್ನಾ ಮಾಡಿ, ಬಡವರನ್ನು ಹಾಗೂ ಅಸಂಘಟಿತರನ್ನು ಮೇಲೆತ್ತುವ ಕೆಲಸ ಮಾಡಿದರು ಎಂದು ಸ್ಮರಿಸಿದರು.

ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಾದ ಎಂ.ಮಲ್ಲರಾಜೇ ಅರಸ್, ಎಸ್.ಉದಯಶಂಕರ್, ಚಿಕ್ಕಲಿಂಗಯ್ಯ, ಎಂ.ಆರ್.ಅನಂತಕುಮಾರ್, ಟಿ. ತ್ಯಾಗರಾಜ್ ಅವರಿಗೆ ಧ್ವನಿ ಕೊಟ್ಟ ಧಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷ ಎಚ್.ಎ.ವೆಂಕಟೇಶ್, ಅನ್ವೇಷಣಾ ಸೇವಾ ಟ್ರಸ್ಟ್ ಸಂಸ್ಥಾಪಕ ಅಮರ್ ನಾಥರಾಜೇ ಅರಸ್, ಸಂಧ್ಯಾ ಸುರಕ್ಷಾ ಟ್ರಸ್ಟ್‌ನ ನಟರಾಜ ಜೋಯಿಸ್, ಕರ್ನಾಟಕ ಅರಸು ಮಹಾಮಂಡಳಿ ಟ್ರಸ್ಟ್ ಉಪಾಧ್ಯಕ್ಷ ಡಾ.ಎಂ.ಜಿ.ಆರ್.ಅರಸ್, ಅನ್ವೇಷಣಾ ಸೇವಾ ಟ್ರಸ್ಟ್ ಉಪಾಧ್ಯಕ್ಷ ಎಚ್.ಎಂ.ಟಿ. ಲಿಂಗರಾಜೇ ಅರಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net