

ವೀಣಾ ಶಾರದಾ ಇವೆಂಟ್ಸ್ ವತಿಯಿಂದ ಡಾ.ವಿಷ್ಣುವರ್ಧನ್ ಗಾನ ವೃಂದದ ಆಶ್ರಯದಲ್ಲಿ ಅ.27ರಂದು ಡಾ.ವಿಷ್ಣುವರ್ಧನ್ ಗಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆ ಮುಖ್ಯಸ್ಥರಾದ ವೀಣಾ ಸುರೇಶ್ ತಿಳಿಸಿದರು.
ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಸಂಜೆ 4ಕ್ಕೆ ಕಾರ್ಯಕ್ರಮ ಶುರುವಾಗಲಿದೆ. ಸೆ.18ರಂದು ನಟ ವಿಷ್ಣುವರ್ಧನ್ ಹುಟ್ಟುಹಬ್ಬವಿತ್ತು. ಆದರೆ, ಆ ವೇಳೆ ಸಭಾಂಗಣ ದೊರೆಯದ ಕಾರಣ ಹಾಗೂ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿದ ಸಂದರ್ಭದಲ್ಲಿ ಅ.27ರಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.