ಡಾ.ಭಾನುಪ್ರಕಾಶ್ ಶರ್ಮ ಅವರನ್ನು ಬೆಂಬಲಿಸಿ

vote
Published on

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಸಭಾದ ಹಾಲಿ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರ ಬೆಂಬಲಿತ ಅಭ್ಯರ್ಥಿಯಾಗಿ ಡಾ.ಭಾನುಪ್ರಕಾಶ್ ಶರ್ಮ ಅವರನ್ನು ವಿಪ್ರ ಸಮುದಾಯದವರು ಬೆಂಬಲಿಸಬೇಕು ಎಂದು ವಿಪ್ರ ಮುಖಂಡ ಹರೀಶ್ ಕಡಕೊಳ ಮನವಿ ಮಾಡಿದರು.

ಮೈಸೂರು ಜಿಲ್ಲಾ ಪ್ರತಿನಿಧಿ 2ಸ್ಥಾನದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಕಡಕೊಳ ಜಗದೀಶ್ ಬೆಂಬಲಿಸಬೇಕೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.

ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ಇವರು ಅವಿರತ ಶ್ರಮಿಸಲಿದ್ದಾರೆ. ಮತದಾನದ ದಿನದಂದು ಆಗಮಿಸಿ ಕಡ್ಡಾಯವಾಗಿ ಮತದಾನ ಮಾಡಿ ಗೆಲುವಿಗೆ ಸಹಕರಿಸಬೇಕು. ನಗರದ ಭಗಿನಿ ಸೇವಾ ಸಮಾಜದಲ್ಲಿ ಮತದಾನ ಏ.13 ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ನಡೆಯಲಿದೆ. ಬ್ರಾಹ್ಮಣ ಬಂಧುಗಳು ತಪ್ಪದೆ ಆಗಮಿಸಿ ಮತದಾನ ಮಾಡುವುದರ ಮೂಲಕ ಬ್ರಾಹ್ಮಣ ಮಹಾಸಭಾ ಸಂಘಟನೆಗೆ ಶಕ್ತಿ ತುಂಬಬೇಕಾಗಿ ಮನವಿ ಮಾಡಿದರು.

ವಿಪ್ರ ಜಾಗೃತಿ ವೇದಿಕೆಯ ಅಧ್ಯಕ್ಷ ನಾಗರಾಜು, ಪ್ರಮುಖರಾದ ಮುಳ್ಳೂರು ಸುರೇಶ್, ಚಕ್ರಪಾಣಿ, ಲತಾ ಬಾಲಕೃಷ್ಣ, ಮಂಜುನಾಥ್, ಜ್ಯೋತಿ ಹಾಜರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net