ಡಾ.ಪುನೀತ್ ಜನ್ಮದಿನ ಆಚರಣೆ

Punit Rajkumar Temple
Published on

ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಡಾ.ಪುನೀತ್ ರಾಜ್‌ಕುಮಾರ್ ಜನ್ಮದಿನ ಆಚರಿಸಲಾಯಿತು.

ಹಿರಿಯ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ, ಪುನೀತ್ ನಮ್ಮನ್ನು ಅಗಲಿಲ್ಲ ಎನ್ನುವುದಕ್ಕೆ ಇಂದಿಗೂ ರಾಜ್ಯ ಹಾಗೂ ಇತರೆಡೆಯೂ ಅವರ ಹುಟ್ಟುಹಬ್ಬ ಆಚರಿಸುತ್ತಿರುವುದೇ ಸಾಕ್ಷಿ. ಆತ ಮಾಡಿದ ಸಮಾಜಮುಖಿ ಕಾರ್ಯಗಳು ಮರಣ ನಂತರ ಬಹಿರಂಗವಾದಾಗ ನಿಜಕ್ಕೂ ಪ್ರಚಾರ ಬಯಸದೇ ಸಮಾಜಕ್ಕೆ ನೆರವಾಗುವವರು ಈಗಲೂ ಇದ್ದಾರೆಯೇ ಎಂಬ ಅಚ್ಚರಿ ಮೂಡುತ್ತದೆ ಎಂದರು.

ಕಾಂಗ್ರೆಸ್ ಮುಖಂಡ ಎನ್.ಎಂ.ನವೀನ್‌ಕುಮಾರ್ ಮಾತನಾಡಿದರು. ಜ್ಯೋತಿಷಿ ವಿಷ್ಣು ಸಾಲಿಗ್ರಾಮ, ಎನ್.ರಾಜು, ಪ್ರತಿಷ್ಠಾನದ ಅಧ್ಯಕ್ಷ ಬಸವರಾಜೇದ್ರ ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net