

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 2020ನೇ ಸಾಲಿನ ನೀಡುವ ಪ್ರತಿಷ್ಠಿತ ಕೆ.ಮೋಹನ್‌ದೇವ್ ಆಳ್ವ ಹಾಗೂ ಡಾ.ಎಂ.ಕೆ.ಶೈಲಜಾ ಆಳ್ವ ಪ್ರಶಸ್ತಿಗೆ ಖ್ಯಾತ ಸಂಗೀತಗಾರ ಡಾ.ಎಂ.ಆರ್.ವಿ.ಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದೆ. ಡಾ. ಮನು ಬಳಿಗಾರ್ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಇವರ ಹೆಸರನ್ನು ಸೂಚಿಸಲಾಯಿತು. ಪ್ರಶಸ್ತಿ ಮೊತ್ತ 30 ಸಾವಿರ ರೂ ಹಾಗೂ ಲಕ ಒಳಗೊಂಡಿದೆ.