ಡಾ.ಎ.ಎಸ್.ಚಂದ್ರಶೇಖರ್, ಡಾ.ಜಯಶ್ರೀ ದಂಪತಿಗೆ ಯೋಗ ವೈದ್ಯರತ್ನ ಪ್ರಶಸ್ತಿ ಪ್ರದಾನ

4
Published on

ಮೈಸೂರು ಯೋಗ ಒಕ್ಕೂಟವು ರಾಮಕೃಷ್ಣನಗರದ ಪರಮಹಂಸ ಯೋಗ ಮಹಾವಿದ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ.ಎ.ಎಸ್.ಚಂದ್ರಶೇಖರ್ ಹಾಗೂ ಡಾ.ಜಯಶ್ರೀ ದಂಪತಿಗೆ ಯೋಗ ವೈದ್ಯರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಚಂದ್ರಶೇಖರ್ ಅವರಿಗೆ 70ನೇ ಹಾಗೂ ಜಯಶ್ರೀ ಅವರಿಗೆ 60ನೇ ಜನ್ಮದಿನವಾಗಿದ್ದು, ಈ ದಂಪತಿಯೂ ಆಯುರ್ವೇದ ವೈದ್ಯರಾಗಿದ್ದುಕೊಂಡು ಕಳೆದ ಮೂರ್ನಾಲ್ಕು ದಶಕಗಳಿಂದ ಸಮಾಜಮುಖಿಯಾಗಿ ಮಾಡುತ್ತಿರುವ ಸೇವೆ ಹಾಗೂ ಯೋಗ ಕ್ಷೇತ್ರಕ್ಕೆ ನೀಡಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಯಿತು.

ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ವಿ.ಲಕ್ಷ್ಮೀನಾರಾಯಣ ಶೆಣೈ, ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆಯ ನಿವೃತ್ತ ಪ್ರಾಧ್ಯಾಪಕ ಡಾ. ಸದಾನಂದ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸುಯೋಗ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ, ಎಂಐಟಿ ಅಧ್ಯಕ್ಷ ಡಾ.ಎಸ್.ಮುರಳಿ, ಹಿಮಾಲಯ ಪ್ರತಿಷ್ಠಾನ ಅಧ್ಯಕ್ಷ ಎನ್.ಅನಂತ, ಜಿಎಸ್‌ಎಸ್ ಸಂಸ್ಥಾಪಕ ಶ್ರೀಹರಿ ದ್ವಾರಕನಾಥ್, ಶಿವಪ್ರಕಾಶ್, ಜಲೇಂದ್ರಕುಮಾರ್, ಯೋಗಕುಮಾರ್, ಕೆ.ಜಿ.ದೇವರಾಜು, ಬಿ.ಪಿ.ಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net