ಟ್ರ್ಯಾಕ್ಟರ್ ಹಿಮ್ಮುಖ ಚಾಲನೆ ಮಾಡಿದವನ ಮೇಲೆ ಕೇಸ್

Published on


ಯಾದಗಿರಿ: ನಾಗರ ಪಂಚಮಿ ಹಬ್ಬದ ನಿಮಿತ್ತ ನಿಮಿತ್ತ ಬಾಜಿ (ಷರತ್ತು) ಕಟ್ಟಿ ಹಿಮ್ಮುಖವಾಗಿ ಟ್ರ್ಯಾಕ್ಟರ್ ಚಾಲನೆ ಮಾಡಿದ ಯುವಕರ ಮೇಲೆ ವಡಿಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಪಂಚಮಿ ಹಬ್ಬದ ನಿಮಿತ್ತ ಹಿಮ್ಮುಖ ಟ್ರ್ಯಾಕ್ಟರ್ ಚಾಲನೆ ಮಾಡುವ ಸ್ಪಧರ್ೆ ಏರ್ಪಡಿಸಲಾಗಿತ್ತು. ಗ್ರಾಮದ ಹೆದ್ದಾರಿಯಿಂದ ನಾಯ್ಕಲ್ ಕ್ರಾಸ್ವರೆಗೆ 24 ಕಿ.ಮೀಟರ್ ಬಸಲಿಂಗಪ್ಪ ಹಾಗೂ ಪರಶುರಾಮ ಟೋಕಾಪುರ ಚಾಲನೆ ಮಾಡಿದ್ದರು. ಸ್ಪಧರ್ೆಯದಲ್ಲಿ ಬಸಲಿಂಗಪ್ಪ ಗೆದ್ದು 1.45 ಲಕ್ಷ ರೂ.ಬಹುಮಾನ ಪಡೆದಿದ್ದ.
ಆದರೆ, ಹೆದ್ದಾರಿಯಲ್ಲಿ ರಸ್ತೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಈ ಇಬ್ಬರು ಯುವಕರ ಮೇಲೆ ವಡಿಗೇರಾ ಪೊಲೀಸರು ಬುಧವಾರ ಐಪಿಸಿ ಕಲಂ 279, 336ರಡಿ ಕೇಸ್ ದಾಖಲಿಸಿದ್ದಾರೆ. ಅಲ್ಲದೆ ಇವರಿಗೆ ಪ್ರೋತ್ಸಾಹ ನೀಡಿದ 15 ಜನ ಸೈಕಲ್ ಸವಾರರಿಗೂ ದಂಡ ವಿಸಿದ್ದಾರೆ.

ಸಾರ್ವಜನಿಕರಿಗೆ ಅಪಾಯವಾಗುವಂತೆ ಮೋಟಾರ್ ಸೈಕಲ್ ವೀಲಿಂಗ್ ಮಾಡುವುದಾಗಲಿ, ಟ್ರ್ಯಾಕ್ಟರ್ಗಳನ್ನು ಹಿಮ್ಮುಖವಾಗಿ ಚಾಲನೆ ಮಾಡುವುದರಿಂದ ಸಾರ್ವಜನಿಕ ಚಲಿಸುವುದನ್ನಾಗಲಿ ಮಾಡುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಸಿ.ಬಿ.ವೇದಮೂತರ್ಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net