

ಬೆಳಗಾವಿ: ನಗರದ ಖಾಸಗಿ ಜಾಗದಲ್ಲಿ ನಿಲ್ಲಿಸಿದ್ದ ಟ್ರಕ್ಗಳ ಸಾವಿರಾರು ರೂ.ಬೆಲೆಬಾಳುವ 14 ಹೊಸ ಟೈರ್ಗಳನ್ನು ರಾತ್ರೋರಾತ್ರಿ ಕಳ್ಳತನ ಮಾಡಿರುವ ಟನೆ ಬುಧವಾರ ತಡರಾತ್ರಿ ನಡೆದಿದೆ.
ಇಲ್ಲಿನ ರಾಷ್ಟ್ರೀಯ ಹೆದ್ದಾರಿ&4 ಹಲಗಾ ಸರ್ವಿಸ್ ರಸ್ತೆ ಪಕ್ಕದ ಖಾಸಗಿ ಮಾಲೀಕತ್ವದ ಜಾಗದಲ್ಲಿ ಅಶೋಕ ಲೈಲೆಂಡ್ ಕಂಪನಿಯ ಹಲವು ಚೆಸ್ಸಿಗಳನ್ನು ಕಳೆದ ನಾಲ್ಕೆದು ದಿನಗಳಿಂದ ನಿಲ್ಲಿಸಲಾಗಿತ್ತು. ಓರ್ವ ಕಾವಲುಗಾರನನ್ನು ನಿಯೋಜಿಸಲಾಗಿತ್ತು. ಆದರೆ, ಬುಧವಾರ ತಡರಾತ್ರಿ ನಾಲ್ಕೆದು ಖದೀಮರ ತಂಡ ವೈವಸ್ಥಿತ ಸಲಕರಣೆಗಳೊಂದಿಗೆ ಆಗಮಿಸಿ, ಚೆಸ್ಸಿಗಳಿಗೆ ಜಾಕ್ ಹಚ್ಚಿ 14 ಟೈಯರ್ ಹಾಗೂ ಒಂದು ಬ್ಯಾಟರಿ ಕದ್ದೊಯ್ದಿದ್ದಾರೆ.
ಟೈರ್ ಬಿಚ್ಚುತ್ತಿರುವ ಶಬ್ದ ಕೇಳಿ ಸ್ಥಳಕ್ಕೆ ತೆರಳಿ ನೋಡಿದಾಗ ಮುಖಕ್ಕೆ ಬಟ್ಟೆ ಕಟ್ಟಿ, ಪ್ರಜ್ಞೆ ತಪ್ಪಿಸಿ, ಕೃತ್ಯ ಎಸಗಿದ್ದಾರೆ ಎಂದು ಕಾವಲುಗಾರ ಗುರುವಾರ ಬೆಳಗಿನ ಜಾವ ಮಾಲೀಕರಿಗೆ ವಿಷಯ ತಿಳಿಸಿದ್ದಾನೆ. ಸ್ಥಳಕ್ಕೆ ಭೇಟಿದ ಮಾಳಮಾರುತಿ ಠಾಣೆ ಪೊಲೀಸರು ಪರಿಶೀಲಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಇದೇ ಸ್ಥಳದ ಸಮೀಪದಲ್ಲಿರುವ ಪಾನ್ಶಾಪ್ವೊಂದರಲ್ಲಿಯೂ ಕಳ್ಳತನ ನಡೆದಿತ್ತು ಎಂದು ಸ್ಥಳಿಯರು ತಿಳಿಸಿದ್ದಾರೆ. ಆದ್ದರಿಂದ ಪೊಲೀಸರ ರಾತ್ರಿ ಗಸ್ತು ಹೆಚ್ಚಿಸಬೇಕು ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ.