ಟೆರಾಕೋಟಾ ಭಿತ್ತಿ ಶಿಲ್ಪಕಲಾ ಶಿಬಿರ ಉದ್ಘಾಟನಾ ಕಾರ್ಯಕ್ರಮ

YLP DRAMA
Published on

 ಮೈಸೂರು ದಸರಾ ಮಹೋತ್ಸವ-2025 ದಸರಾ ಲಲಿತಕಲೆ ಕಲೆ ಉಪಸಮಿತಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಬೆಂಗಳೂರು ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜು, (ಕಾವಾ) ಮೈಸೂರು ಇವರ ಸಹಯೋಗದಲ್ಲಿ ಟೆರಾಕೋಟಾ ಭಿತ್ತಿ ಶಿಲ್ಪಕಲಾ ಶಿಬಿರವನ್ನು ಸೆಪ್ಟೆಂಬರ್ 02 ರಿಂದ ಸೆಪ್ಟೆಂಬರ್ 08 ರವರೆಗೆ ಹಾಗೂ ಸೆಪ್ಟೆಂಬರ್ 22 ರಿಂದ ಸೆಪ್ಟೆಂಬರ್ 28 ರವರೆಗೆ ಆಯೋಜಿಸಲಾಗಿದೆ.

 ಉದ್ಘಾಟನಾ ಕಾರ್ಯಕ್ರಮವನ್ನು ಸೆಪ್ಟೆಂಬರ್ 02 ರಂದು ಬೆಳಗ್ಗೆ 11:30 ಗಂಟೆಗೆ ಕಾವಾ ಕಾಲೇಜು ಆವರಣ ಮೈಸೂರು ಇಲ್ಲಿ ಆಯೋಜಿಸಲಾಗಿದೆ.

 ಬೆಂಗಳೂರಿನ ಹಿರಿಯ ದೃಶ್ಯ ಕಲಾ ವಿಮರ್ಶಕರಾದ ಕೆ.ವಿ. ಸುಬ್ರಮಣ್ಯಂ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಕಾವಾ, ಡೀನ್ ಹಾಗೂ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತರು, ದಸರಾ ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿಯ ಉಪವಿಶೇಷಾಧಿಕಾರಿಗಳಾದ ಎ. ದೇವರಾಜು ಅಧ್ಯಕ್ಚತೆಯನ್ನು ವಹಿಸಲಿದ್ದಾರೆ.

 ಬೆಂಗಳೂರಿನ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾದ ಎಂ.ಸಿ. ರಮೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಬೆಂಗಳೂರಿನ ಟರಾಕೋಟಾ ಭಿತ್ತಿ ಶಿಲ್ಪಕಲಾ ಶಿಬಿರದ ನಿರ್ದೇಶಕರಾದ ಉಲ್ಲಾಸ್ಕರ್ ಡೇ, ಕಾವಾ, ದಸರಾ ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿಯ ಕಾರ್ಯಾಧ್ಯಕ್ಷರಾದ ನಿರ್ಮಲ ಎಸ್ ಮಠಪತಿ ಉಪಸ್ಥಿತರಿರುವರು.

 ಬೆಂಗಳೂರಿನ ಗಣೇಶ್ ಶರ್ಮಿ, ಕಲಬುರಗಿ ಜಿಲ್ಲೆಯ ರುಕ್ಕಪ್ಪಾ ಕುಂಬಾರ, ಬೆಳಗಾವಿ ಜಿಲ್ಲೆಯ ವಿಠ್ಠಲ್ ದೇವೇಂದ್ರ ಗವಿ, ಮೈಸೂರು ಜಿಲ್ಲೆಯ ವಿಜಯ್ ಕುಮಾರ್ ಸಿ.ಎನ್, ಚಾಮರಾಜನಗರ ಜಿಲ್ಲೆಯ ಮಹದೇವಸ್ವಾಮಿ, ಬೆಂಗಳೂರಿನ ವಿನ್ಯಾಸ್ ಕಾಟೇನಹಳ್ಳಿ ಟೆರಾಕೋಟಾ ಭಿತ್ತಿ ಶಿಲ್ಪ ಕಲಾ ಶಿಬಿರದ ಹಿರಿಯ ಶಿಲ್ಪಿಗಳು ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net