ಟೆಂಡರ್ ಬಿಲ್ ಕೊಡಲು ಲಂಚಕ್ಕೆ ಬೇಡಿಕೆಯಿಟ್ಟ ಪೌರಾಯುಕ್ತ...? ಇಬ್ಬರು ಅಧಿಕಾರಿಗಳು ಎಸಿಬಿ ಬಲೆಗೆ

Published on

ಹಾವೇರಿ: ಸ್ಥಳೀಯ ನಗರಸಭೆ ಕಚೇರಿಯಲ್ಲಿ ಮಂಗಳವಾರ 15ಸಾವಿರ ರೂ. ಲಂಚ ಪಡೆಯುವಾಗ ಪೌರಾಯುಕ್ತ ವಿ.ಎಂ. ಪೂಜಾರ ಮತ್ತು ಕಿರಿಯ ಆರೋಗ್ಯ ನಿರೀಕ್ಷಕ ಸೋಮಶೇಖರ ಮಲ್ಲಾಡದ ಅವರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ನಗರದ 15ಸ್ಥಳಗಳಲ್ಲಿ ಸ್ವಚ್ಛ ಭಾರತ ಯೋಜನೆಯ ಜಾಗೃತಿ ಫಲಕಗಳನ್ನು ಅಳವಡಿಸಲು ದಾವಣಗೆರೆಯ ಗ್ಲೋಬಲ್ ವಿಂಗ್ ಸೊಸೈಟಿ ಟೆಂಡರ್ ಪಡೆದಿತ್ತು. ಕಾಮಗಾರಿ ಪೂರ್ಣಗೊಳಿಸಿದ್ದರೂ ಗುತ್ತಿಗೆದಾರರಿಗೆ ಟೆಂಡರ್ ಮೊತ್ತ 3ಲಕ್ಷ ರೂ.ಗಳನ್ನು ನೀಡಲು 15ಸಾವಿರ ರೂ.ಗಳ ಲಂಚದ ಬೇಡಿಕೆಯನ್ನು ಇಬ್ಬರು ಇಟ್ಟಿದ್ದರು.
ಈ ಕುರಿತು ಗ್ಲೋಬಲ್ ವಿಂಗ್ ಸೊಸೈಟಿ ಮಾಲೀಕ ಅಣ್ಣಪ್ಪ ನಾಯ್ಕ ಎಸಿಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಎಸಿಬಿ ಡಿವೈಎಸ್‌ಪಿ ಬಿ.ಆರ್. ಗೋಪಿ ನೇತೃತ್ವದ ತಂಡ ಮಂಗಳವಾರ ಸಂಜೆ 4.30ರ ವೇಳೆಗೆ ದಾಳಿ ನಡೆಸಿ ಇಬ್ಬರನ್ನು ಬಲೆಗೆ ಕೆಡವಿದೆ. ದಾಖಲೆಗಳ ಪರಿಶೀಲನೆ ಮುಂದುವರಿದಿದ್ದು, ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗುವುದು ಎಂದು ಎಸಿಬಿ ಅಧಿಕಾರಿಗಳು ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net